ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಹಾತ್ಮ ಗಾಂಧಿ ಪ್ರತಿಮೆ ಎದುರು ಭಜನೆ

ಧಾರವಾಡ: ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಇರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿಗೆ ಇಂದು ಭಜನೆ ಮೇಳದವರು ಸಾಥ್ ನೀಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಹಿತರಕ್ಷಣಾ ಪರಿವಾರದ ಸದಸ್ಯರು ಪಿ.ಎಚ್.ನೀರಲಕೇರಿ, ಶ್ರೀಶೈಲಗೌಡ ಕಮತರ ನೇತೃತ್ವದಲ್ಲಿ ನಡೆಸುತ್ತಿರುವ ನಿರಂತರ ಧರಣಿಗೆ ವಿವಿಧ ಹಳ್ಳಿಗಳ ರೈತರು ಬೆಂಬಲ ಸೂಚಿಸುತ್ತಿದ್ದಾರೆ.

ಇಂದು ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ರೈತರು ಭಜನೆ ಸಮೇತ ಆಗಮಿಸಿ ಧರಣಿಗೆ ಬೆಂಬಲ ಸೂಚಿಸಿ, ಕೃಷಿ ವಿರೋಧಿಯಾಗಿರುವ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಇವರೊಂದಿಗೆ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಕೂಡ ಈ ಧರಣಿಗೆ ಬೆಂಬಲ ಸೂಚಿಸಿದರು.

ಅಮ್ಮಿನಬಾವಿ ಗ್ರಾಮದ ರೈತರು ಕೆಲ ಕಾಲ ಭಜನೆ ಮಾಡಿ ಪ್ರತಿಭಟನೆ ಮಾಡುವ ಮೂಲಕ ಗಮನಸೆಳೆದರು.

Edited By : Manjunath H D
Kshetra Samachara

Kshetra Samachara

10/02/2021 08:43 pm

Cinque Terre

26.94 K

Cinque Terre

2

ಸಂಬಂಧಿತ ಸುದ್ದಿ