ಹುಬ್ಬಳ್ಳಿ: ಚುನಾವಣಾ ಅಂದ್ರೇ ಹಣ, ಉಂಗುರ, ವಾಚು, ಹೆಂಡ ಇತ್ಯಾದಿಗಳ ಆಮಿಷವನ್ನು ಮತದಾರರಿಗೆ ತೋರದೇ ದಕ್ಷತೆ,ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣ ಮಾಡಲು ಹೊರಟಿರುವ ಅಭ್ಯರ್ಥಿ ಶಿವಸೇನಾ ಪಕ್ಷದಿಂದ ಈ ಬಾರಿ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದಿಂದ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ.
ಶಿವಸೇನಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸೋಮಶೇಖರ್ ಉಮರಾಣಿಯವರು ಹತ್ತು ಹಲವಾರು ಕನಸನ್ನು ಹೊತ್ತು ಅಭಿವೃದ್ಧಿ ಸಂಚಲನ ಸೃಷ್ಟಿಸಿ ಪದವೀಧರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸ್ಪರ್ಧೆಗೆ ಇಳಿದಿದ್ದು, ಪದವೀಧರರ ಸಮಸ್ಯೆಗಳು ಮತ್ತು ಮಾಡಬೇಕಾದ ಕ್ರಿಯಾ ಯೋಜನೆ ಹಾಗೂ ಅಭಿವೃದ್ಧಿಗೆ ಒಂದು ಮಹತ್ವದ ಮೈಲಿಗಲ್ಲನ್ನು ಹಾಕಲು ಸೋಮಶೇಖರ್ ಉಮರಾಣಿಯವರು ಸನ್ನದ್ಧರಾಗಿದ್ದಾರೆ...
ಪ್ರತಿಯೊಂದು ಪದವೀಧರರು ಕೂಡ ಶಿಕ್ಷಣದ ಸಂದರ್ಭದಲ್ಲಿ ಹಾಗೂ ಶಿಕ್ಷಣದ ನಂತರದಲ್ಲಿ ಅನುಭವಿಸುವ ಸಮಸ್ಯೆಗಳನ್ನು ನಿವಾರಣೆ ಮಾಡುವಂತ ಹಲವಾರು ಕನಸನ್ನು ಹೊತ್ತಿರುವ ಸೋಮಶೇಖರ ಉಮರಾಣಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಜಯಶಾಲಿಯಾಗುವಂತೆ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
Kshetra Samachara
25/10/2020 03:30 pm