ಧಾರವಾಡ: ಪಶ್ಚಿಮ ಪದವೀಧರರ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಸವರಾಜ ಗುರಿಕಾರ ಅವರು, ಶನಿವಾರ ತಮ್ಮ ಹುಟ್ಟೂರಾದ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಇಂದು ಗದಗ ನಗರ, ಹೊಸಹಳ್ಳಿ ಹಾಗೂ ರೋಣ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಗುರಿಕಾರ ಪ್ರಚಾರ ಮಾಡಿದರು.
ಗುರಿಕಾರ ಅವರು ಪ್ರಚಾರಕ್ಕೆ ಬಂದಿದ್ದ ವೇಳೆ ಪದವೀಧರರು ತಮಗಿರುವ ಸಮಸ್ಯೆಗಳ ಕುರಿತು ಅಳಲು ತೋಡಿಕೊಂಡರು. ಇವರ ನೋವಿಗೆ ಸ್ಪಂದಿಸಿದ ಗುರಿಕಾರ, ಪರಿಷತ್ ಸದಸ್ಯನಾದರೆ ಪದವೀಧರರ ಎಲ್ಲ ನೋವಿಗೆ ಸ್ಪಂದಿಸುತ್ತೇನೆ ಎಂಬ ಭರವಸೆ ನೀಡಿದರು.
ಇನ್ನು ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ನರಗುಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಸವರಾಜ ಗುರಿಕಾರ ಬೆಂಬಲಿಗರು ಪ್ರಚಾರ ಮಾಡಿದರು.
ಗಣೇಶ ಜಿರಗೋಡ, ಸೋಮು ಹಂಚಿನಮನಿ, ಯಲ್ಲಪ್ಪ ಜಿರಗೋಡ, ಕಲ್ಮೇಶ ಮುಗದ, ಫಕ್ಕೀರ ಮುಗದ, ಆಕಾಶ ಜಿರಗೋಡ, ಪ್ರಕಾಶ ಮುಗದ, ಮಂಜುನಾಥ ಹಂಚಿನಮನಿ ಅವರು ಅಳ್ನಾವರ ಪಟ್ಟಣದಲ್ಲಿ ಪ್ರಚಾರ ಮಾಡಿದರೆ, ರಮೇಶ ಕುಂಬಾರ ಹಾಗೂ ಸುರೇಶ್ ಕುಂಬಾರ ಅವರ ತಂಡವು ಶಿರಗುಪ್ಪಿ, ನಾಗರಹಳ್ಳಿ ಹಾಗೂ ಇಂಗಳಹಳ್ಳಿ ಗ್ರಾಮಗಳಲ್ಲಿ ಪ್ರಚಾರ ಮಾಡಿದರು.
ಧಾರವಾಡದ ಶಿವಳ್ಳಿ, ಚಂದನಮಟ್ಟಿ, ಕನಕೂರ, ಕೌಲಗೇರಿ, ಹೆಬ್ಬಳ್ಳಿ, ಮಾಧನಭಾವಿ, ಯರಿಕೊಪ್ಪ ಗ್ರಾಮಗಳಲ್ಲಿ ಆನಂದ ಹಾರಿಕೊಪ್ಪ ಅವರ ತಂಡ ಪ್ರಚಾರ ನಡೆಸಿದರೆ, ಎಸ್.ಬಿ.ಪೂಜಾರ ಅವರ ತಂಡವು ಹುಬ್ಬಳ್ಳಿಯ ವಿವಿಧ ಕಾಲೇಜುಗಳಲ್ಲಿ ಪ್ರಚಾರ ಮಾಡಿತು.
ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಾಗರಾಜ ಉಣಕಲ್, ರಾಘು ನರಗುಂದ ತಂಡವು ಪ್ರಚಾರ ಕಾರ್ಯ ಮಾಡಿತು.
ಇತ್ತ ಹಳಿಯಾಳ ಮತ್ತು ದಾಂಡೇಲಿಯಲ್ಲಿ ರವಿಕುಮಾರ ಜಮಖಂಡಿ, ಸುಭಾನಿ ಹಳಿಯಾಳ ಇವರ ತಂಡ ಪ್ರಚಾರ ನಡೆಸಿದರೆ, ಶಂಕರ ಸಾವೂರ, ಶಿವರಾಜ ಕರಿಗಾರ, ಚಂದ್ರು ಇವರ ತಂಡವು ಹಾವೇರಿ ಜಿಲ್ಲೆಯಲ್ಲಿ ಪ್ರಚಾರ ನಡೆಸಿತು.
Kshetra Samachara
17/10/2020 08:41 pm