ಕುಂದಗೋಳ : ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆ ನಡೆದು ಒಂದು ವರ್ಷದ ಬಳಿಕ ಚುನಾಯಿತ ಸದಸ್ಯರಿಗೆ ಖುರ್ಚಿ ಏರುವ ಭಾಗ್ಯ ದೊರೆತರು ಸದ್ಯ ಪ್ರಕಟವಾಗಿರುವ ಅಧ್ಯಕ್ಷ ಪಟ್ಟದ ಮೀಸಲಾತಿಯ ತೆರೆ ಮರೆಯ ತಿಕ್ಕಾಟ ನೂತನ ಕಮೀಟಿ ರಚನೆ ಮತ್ತಷ್ಟು ವಿಳಂಬವಾಗಿ ಕುಂದಗೋಳ ಪಟ್ಟಣದ ಅಭಿವೃದ್ಧಿ ಮಾತು ದೂರಾಗುತ್ತಿದೆ.
ಪಟ್ಟಣ ಪಂಚಾಯಿತಿ ಒಟ್ಟು 19 ಸದಸ್ಯರ ಬಲ ಹೊಂದಿದ್ದು ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಬಿಜೆಪಿ 12 ಕಾಂಗ್ರೆಸ್ 05 ಪಕ್ಷೇತರರು 02 ವಾರ್ಡಗಳಲ್ಲಿ ಗೆಲುವು ಕಂಡಿದ್ದು ಜೆಡಿಎಸ್ ಖಾತೆ ತೆರೆಯುವಲ್ಲಿ ವಿಫಲವಾಗಿದೆ ಈಗಾಗಲೇ ಅಧ್ಯಕ್ಷ ಸ್ಥಾನ 'ಸಾಮಾನ್ಯವರ್ಗ' ಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ 'ಅ' ವರ್ಗಕ್ಕೆ ಮೀಸಲಾತಿ ತಿಳಿದ ಬಿಜೆಪಿ 12 ಸದಸ್ಯರು ನಾಯಕರ ಮನೆಗೆ ಅಲೆದಾಟ ಆರಂಭಿಸಿದ್ದು ಸತತ ಮೂರು ಭಾರಿ ಪಪಂ ಆಯ್ಕೆಯಾದ ಮಲ್ಲಿಕಾರ್ಜುನ ಕಿರೇಸೂರು, ಉದ್ಯಮಿ ವಾಗೀಶ್ ಗಂಗಾಯಿ, ಪ್ರತಿಷ್ಠಿತ ನಾಡಗೀರ ವಾಡೆಯ ಧಣಿ ಶ್ಯಾಮಸುಂದರ್ ದೇಸಾಯಿ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಇದೆ.
ಆದ್ರೆ ಈ ಮೊದಲು ಪ್ರಕಟವಾದ 'ಅ' ವರ್ಗದ ಮೀಸಲಾತಿ ಬಗ್ಗೆ ಭುವನೇಶ್ವರಿ ಕವಲಗೇರಿ ಅಸಮಾಧಾನ ತೋರಿದ್ದು ಮೀಸಲಾತಿ ವಿರುದ್ಧ ಮನವಿ ಸಲ್ಲಿಸದ ಕಾರಣ ಒದಗಿದ ಅವಕಾಶ ಹೋಗಿದೆ ತಮಗೆ ಮತ್ತೆ ಅವಕಾಶ ನೀಡುವಂತೆ ಪಕ್ಷಕ್ಕೆ ಒತ್ತಾಯ ಹೇರಿದ್ದಾರೆ.
ಆದರೆ 12 ಸದಸ್ಯರ ಬಲ ಹೊಂದಿದ ಕಮಲಿಗರ ತಿಕ್ಕಾಟವನ್ನ ಕಾಂಗ್ರೆಸ್ ಸದಸ್ಯರು ಮೂಕ ವೀಕ್ಷಕರಾಗಿದ್ದು ಬಿಜೆಪಿ ಸದಸ್ಯರ ಅಧ್ಯಕ್ಷ ಸ್ಥಾನದ ಪ್ರಬಲ ಪೈಪೋಟಿ ಪಕ್ಷದ ವರಿಷ್ಠರ ಕಚೇರಿ ಬಾಗಿಲು ತಟ್ಟುವ ಎಲ್ಲ ಲಕ್ಷಣ ಕಾಣುತ್ತಲ್ಲಿವೆ ಈ ಗದ್ದಲದಿಂದ ವಾರ್ಡ್ ಅಭಿವೃದ್ಧಿಗಾಗಿ ಮತ ಕೊಟ್ಟ ಜನಸಾಮಾನ್ಯ ದೂರವೇ ಉಳಿದಿದ್ದಾರೆ.
Kshetra Samachara
12/10/2020 08:53 pm