ಕಲಘಟಗಿ:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಿರುದ್ಧ ಸಿಸಿಬಿ,ಸಿಬಿಐ,ಐಟಿ ಹಾಗೂ ಇಡಿ ರೇಡ ಮಾಡಿಸಿರುವ ಬಿಜೆಪಿ ಸರಕಾರ ರಾಜಕೀಯ ಷಡ್ಯಂತ್ರ ಮಾಡುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಂಜುನಾಥ ಮುರಳ್ಳಿ ಮಾತನಾಡಿ,ಬಿಜೆಪಿ ಸರಕಾರ ಅಧಿಕಾರ ಬಳಸಿ ಸಿಬಿಐ,ಐಟಿ,ಇಡಿ ಅಧಿಕಾರಿಗಳನ್ನು ಕೈಗೊಂಬೆ ಮಾಡಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಮನೆಯ ಮೇಲೆ ದಾಳಿಮಾಡಿರುವುದು ರಾಜಕೀಯ ದುರುದ್ದೇಶದಿಂದ ಎಂದು ಘಟನೆಯನ್ನು ಖಂಡಿಸಿದರು.ಉತ್ತರ ಪ್ರದೇಶದಲ್ಲಿ ಹತ್ರಾಸ್ ನಲ್ಲಿ ದಲಿತ ಮಹಿಳೆಯ ಅತ್ಯಾಚಾರ ಮಾಡಿರುವ ಹಾಗೂ ಹತ್ಯೆಗೈಯದ ಆರೋಪಿಗಳನ್ನು ಬಂಧಿಸಿ ಗಲ್ಲುಶಿಕ್ಷೆ ವಿಧಿಸಬೇಕೆಂದು ಆಗ್ರಹ ಮಾಡಲಾಯಿತು.ಮನವಿ ಪತ್ರವನ್ನು ತಹಶೀಲ್ದಾರ ಅಶೋಕ ಶಿಗ್ಗಾವಿ ಅವರಿಗೆ ನೀಡಲಾಯಿತು.
ಕೆಪಿಸಿಸಿ ಸದಸ್ಯ ಎಸ್ ಆರ್ ಪಾಟೀಲ,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ,ಅಜ್ಮತ ಜಾಗಿರದಾರ,ವೈ ಬಿ ದಾಸಂಕೊಪ್ಪ,ಶಂಕರ್ ಗಿರಿ ಭಾವನವರ,ಬಾಬಾಜಾನ್ ತೆರಗಾಂವ,ಹರಿಶಂಕರ ಮಠದ,ಸೋಮಶೇಖರ ಬೆನ್ನೂರ,ಗಿರೀಶ ಸೂರ್ಯವಂಶಿ,ಹನುಮಂತ ಕಾಳೆ,ಸೋಯಿಲ್ ಪಟೇಲ್
ಭಾಗವಹಿಸಿದ್ದರು.
Kshetra Samachara
09/10/2020 06:42 pm