ಅಣ್ಣಿಗೇರಿ: ಇಂದು ನಗರೋತ್ಥಾನ ಮೂರನೇ ಹಂತದ ಯೋಜನೆಯಡಿ ಅಂದಾಜು ಮೊತ್ತ 184.48 ಲಕ್ಷ ರೂಗಳಲ್ಲಿ ವಿವಿಧ ಕಾಮಗಾರಿಗಳ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಚಾಲನೆ ನೀಡಿದರು.
ಈ ಯೋಜನೆಯಡಿ ಅಣ್ಣಿಗೇರಿ ಪುರಸಭೆಯ ವಾರ್ಡ್ ನಂಬರ್ 23ರಲ್ಲಿ ಆಶ್ರಯ ಬಡಾವಣೆ ಬಂಗಾರಪ್ಪ ನಗರದಲ್ಲಿ ಮಳೆನೀರಿನ ಚರಂಡಿ ನಿರ್ಮಾಣ, ವಾರ್ಡ್ ನಂ. 6ರಲ್ಲಿ ಶಾರದಾ ಕಾಲೊನಿಯಲ್ಲಿ ರಸ್ತೆ ಹಾಗೂ ಮಳೆನೀರು ಚರಂಡಿ ನಿರ್ಮಾಣ, ವಾರ್ಡ್ 11ರಲ್ಲಿ ಗಣೇಶ ನಗರ ಹೆಬಸೂರ ರಸ್ತೆಯಲ್ಲಿ ಮಳೆನೀರು ಚರಂಡಿ ಮತ್ತು ರಸ್ತೆ ನಿರ್ಮಾಣ, ವಾರ್ಡ್ ನಂ. 21ರಲ್ಲಿ ರಾಜರಾಜೇಶ್ವರಿ ನಗರದಲ್ಲಿ ಮಳೆನೀರು ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ವೇಳೆ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಷಣ್ಮುಖ ಗುರಿಕಾರ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡುವಣಿ,ಪುರಸಭೆ ಅಧ್ಯಕ್ಷರಾದ ಗಂಗಾ ಕರೆಟ್ನವರ, ಉಪಾಧ್ಯಕ್ಷರಾದ ಜಕರೆಡ್ಡಿ, ಶಿವಯೋಗಿ ಸುರಕೋಡ, ಅಶೋಕ ಕುರಿ, ಪ್ರವೀಣ ಹಾಳದೋಟರ, ಹಾಗೂ ನಗರದ ಗುರು ಹಿರಿಯರು ಉಪಸ್ಥಿತರಿದ್ದರು.
Kshetra Samachara
28/09/2022 06:11 pm