ಹುಬ್ಬಳ್ಳಿ: ಕನ್ನಡದ ಕಬೀರ್ ಪದ್ಮಶ್ರೀ ಪುರಸ್ಕೃತರು ಹಾಗೂ ಮಹಾನ್ ಪ್ರವಚನಕಾರಾದ ಇಬ್ರಾಹಿಂ ಸುತಾರ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ನಗರದಲ್ಲಿಂದು ಶ್ರದ್ಧಾಂಜಲಿ ಸಲ್ಲಿಸಿದರು.
ನಗರದ ಚನ್ನಮ್ಮ ವೃತ್ತದಲ್ಲಿ ಇಬ್ರಾಹಿಂ ಸುತಾರ ಅವರ ಭಾವಚಿತ್ರಕ್ಕೆ ಕನ್ನಡಪರ ಸಂಘಟನೆಗಳ ಒಕ್ಕೂಟ ಸದಸ್ಯರು ಪುಷ್ಪಾರ್ಪಣೆ ಮಾಡಿ, ಮೆಣದಬತ್ತಿ ಹಿಡಿದು, ಮೌನ ಆಚರಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಈರಪ್ಪ ಎಮ್ಮಿ, ಆನಂದ ದಲಬಂಜನ, ಕುಬೇರ ಪವಾರ್, ರವಿ ಕದಂ, ಶೇಖರಯ್ಯ ಮಠಪತಿ, ಸಂತೋಷ ಸವಣೂರ ಸೇರಿದಂತೆ ಮುಂತಾದವರು ಇದ್ದರು.
Kshetra Samachara
05/02/2022 09:59 pm