ಕುಂದಗೋಳ : ಹುಬ್ಬಳ್ಳಿ ಲಕ್ಷ್ಮೇಶ್ವರ ಅಸಮರ್ಪಕ ಬಸ್ ವ್ಯವಸ್ಥೆ ಕುರಿತಾಗಿ ಸಾರಿಗೆ ಅಧಿಕಾರಿಗಳಿಗೆ ಮನವಿ ನೀಡಿ ವಾರದೊಳಗೆ ಹೆಚ್ಚುವರಿ ಬಸ್ ಕಲ್ಪಿಸಬೇಕೆಂದು ಸಂಶಿ ಗ್ರಾಮಸ್ಥರು ಗಡುವು ನೀಡಿ, ಇಲ್ಲವಾದಲ್ಲಿ ಫೆ.1 ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರು. ಆದರೆ ಜ.31 ಭಾನುವಾರ ಗ್ರಾಮದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಸಭೆ ನಡೆಸಿದ ಸಾರಿಗೆ, ಪೊಲೀಸ್ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಸಮಸ್ಯೆ ವಿವರಿಸಿ, ಅವರ ಸಲಹೆಯಂತೆ ನಾಲ್ಕೈದು ದಿನ ತಾತ್ಕಾಲಿಕವಾಗಿ ಬೆಳಿಗ್ಗೆ 8:30, 9:30 ಮತ್ತು 10: 30 ಹೆಚ್ಚುವರಿ ಬಸ್ ಒದಗಿಸಿ, ಫೆ.6 ರೊಳಗೆ ಶಾಶ್ವತ ಪರಿಹಾರ ನೀಡಲು ಕಾಲಾವಧಿ ಪಡೆದರು.
ಈ ಬಾರಿಯೂ ಬೇಡಿಕೆ ಈಡೇರದಿದ್ದಲ್ಲಿ ಫೆ.7 ಭಾನುವಾರ ಬಸ್ ತಡೆದು ಪ್ರತಿಭಟನೆ ಕೈಗೊಳ್ಳುವದಾಗಿ ಖಡಕ್ ಎಚ್ಚರಿಕೆ ನೀಡಿದ್ದು ಈ ಬಗ್ಗೆ ಶಾಸಕರು ಸಾರಿಗೆ ಅಧಿಕಾರಿಗಳು ಏನು ಕ್ರಮ ರೂಪಿಸುತ್ತಾರೆಂದು ಗ್ರಾಮಸ್ಥರು ಕಾಯುತ್ತಲಿದ್ದಾರೆ.
Kshetra Samachara
01/02/2021 12:09 pm