ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಸರಾ ಸಂಭ್ರಮಕ್ಕೆ ಸೀರೆಯ ಸೊಬಗು : ನವರಾತ್ರಿ ಸಂಭ್ರಮ 2022

ಬಣ್ಣ ಬಣ್ಣದ ಸೀರೆಗಳನ್ನು ಉಟ್ಟುಕೊಂಡು ಹಬ್ಬವನ್ನು ಸಂಭ್ರಮಿಸಲು ಸಿದ್ಧರಾಗಿ.

ಪ್ರತಿವರ್ಷದಂತೆ ಈ ವರ್ಷವು ಬಣ್ಣ ಬಣ್ಣದ ಸೀರೆಗಳೊಂದಿಗೆ ಮಹಿಳೆಯರು ನವರಾತ್ರಿ ಸಡಗರ ಸಂಭ್ರಮಿಸುವುದನ್ನು ಪಬ್ಲಿಕ್ ನೆಕ್ಸ್ಟ್ ಇಮ್ಮಡಿಗೊಳಿಸಲಿದೆ.

9 ದಿನಗಳಕಾಲ 9 ಬಣ್ಣದ ಸೀರೆಯನ್ನು ಉಟ್ಟು ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ನಮ್ಮ ವಾಟ್ಸ್ ಆ್ಯಪ್ ನಂಬರ 7349619443 ಗೆ ಕಳುಹಿಸಿಕೊಡಿ.

ವಿಶೇಷ ಸೂಚನೆ ಅಂದ್ರೆ ಆಯಾ ದಿನ ಹೇಳಿದ ಬಣ್ಣದ ಸೀರೆ ಉಟ್ಟ ಫೋಟೋವನ್ನು ಆಯಾ ದಿನ ಸಂಜೆ 6 ಗಂಟೆಯೊಳಗೆ ಕಳುಹಿಸಿ ಕೊಡಿ. ಇನ್ನು 6 ಗಂಟೆಯೊಳಗೆ ಬಂದ ಫೋಟೋಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

ಪ್ರತಿ ದಿನ ತಪ್ಪದೇ ಫೋಟೋ ಕಳುಹಿಸುವವರಿಗೆ ಸೂಕ್ತ ಬಹುಮಾನವನ್ನು ನೀಡಲಾಗುವುದು.

ಸೆ.26 ರಿಂದ ಅ.4 ವರೆಗೆ ನವರಾತ್ರಿಯ ನವಬಣ್ಣದ ಸೀರೆಯುಟ್ಟು ಫೋಟೋ ಕಳುಹಿಸಿ ಪ್ರತಿ ದಿನ ನೀವು ಕಳುಹಿಸುವ ಫೋಟೋವನ್ನು ನಾವು ನಮ್ಮ ಮಾಧ್ಯಮದಲ್ಲಿ ಪಬ್ಲಿಶ್ ಮಾಡಲಾಗುತ್ತದೆ. ನಾವು ಹೇಳಿದ ಹಾಗೆ 9 ಬಣ್ಣದ ಸೀರೆಯನ್ನು 9 ದಿನ ಉಟ್ಟು ಹಬ್ಬವನ್ನು ಸಂಭ್ರಮಿಸಿದ ವಿಜಯ ಶಾಲಿಗಳು ಸೂಕ್ತ ಬಹುಮಾನ ಪಡೆಯಬಹುದಾಗಿದೆ.

ಸೆ.26 ರಂದು ಬಿಳಿ

ಸೆ.27 ರಂದು ಕೆಂಪು

ಸೆ.28 ರಂದು ನೀಲಿ

ಸೆ.29 ರಂದು ಹಳದಿ

ಸೆ.30 ರಂದು ಹಸಿರು

ಅ.1 ರಂದು ಬೂದು

ಅ.2 ರಂದು ಕೇಸರಿ

ಅ.3 ರಂದು ಗುಲಾಬಿ

ಅ.4 ರಂದು ನೇರಳೆ

ಇನ್ನೇಕೆ ತಡ ಬಣ್ಣ ಬಣ್ಣದ ಸೀರೆ ಉಟ್ಟುಕೊಂಡು ಫೋಟೋ ಕಳುಹಿಸಲು ತಯಾರಿ ಶುರುಮಾಡಿ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/09/2022 09:01 pm

Cinque Terre

51.13 K

Cinque Terre

5

ಸಂಬಂಧಿತ ಸುದ್ದಿ