ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿ.30 ರಂದು ಹಳೇ ಹುಬ್ಬಳ್ಳಿಯಲ್ಲಿ ಕೇತೇಶ್ವರ ಜಯಂತಿ ವಿವಿಧ ಕಾರ್ಯಕ್ರಮ

ಹುಬ್ಬಳ್ಳಿ : ಮೇದಾರ ಸಮಾಜದ ಅಭ್ಯುದಯ ಸಂಘದ ವತಿಯಿಂದ ಡಿ.30 ರಂದು ಸೋಮವಾರ ಶ್ರೀ ಗುರು ಶಿವಶರಣ ಕೇತೇಶ್ವರರ 890ನೇ ಜಯಂತಿಯನ್ನು ಹಳೇ ಹುಬ್ಬಳ್ಳಿಯ ಮೇದಾರ ಓಣಿಯಲ್ಲಿ ಸಂಜೆ 7 ಗಂಟೆಗೆ ನೆರವೇರಲಿದೆ.

ಜಯಂತಿ ಅಂಗವಾಗಿ ಮಹಿಳೆಯರಿಂದ ತೊಟ್ಟಿಲು ಕಾರ್ಯ, ಜೋಗುಳ ಕಾರ್ಯ, ಮುತ್ತೈದೆಯರಿಗೆ ಊಡಿ ತುಂಬುವ ಕಾರ್ಯ ಕೈಗೊಳ್ಳಲಿದ್ದು, ಜಯಂತಿಗೆ ಆಗಮಿಸಿದ ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ. ಕೊರೊನಾ ವೈರಸ್ ಭೀತಿಯಿಂದ ಸಾರ್ವಜನಿಕ ಮೆರವಣಿಗೆ ರದ್ದುಗೊಳಿಸಲಾಗಿದೆ.

ಮೇಧಾ. ಮೇದಾರ. ಬುರುಡ ಸಮಾಜದವರು ಹಾಗೂ ನಗರದ ಎಲ್ಲ ಸಾರ್ವಜನಿಕರು ಕೇತೇಶ್ವರ ಜಯಂತಿಗೆ ಆಗಮಿಸಲು ಆಡಳಿತ ಮಂಡಳಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

27/11/2020 11:41 am

Cinque Terre

24.99 K

Cinque Terre

0

ಸಂಬಂಧಿತ ಸುದ್ದಿ