ಮಕ್ಕಳೇ ಹೇಗಿದ್ದೀರಾ? ಬಣ್ಣ ಬಣ್ಣದ ಬಟ್ಟೆ ತೊಟ್ಟು ಸಿಹಿ ತಿಂಡಿ ತಿಂದು ದೀಪಾವಳಿ ಜಬರ್ ದಸ್ತಾಗಿ ಆಚರಿಸಿರಬೇಕಲ್ಲವೆ? ಕದ್ದು ಮುಚ್ಚಿ ಪಟಾಕಿನೂ ಹಾರಿಸಿರಬೇಕಲ್ಲವೆ?
ಈ ಸಡಗರ ಸಂಭ್ರಮದ ನಡುವೆ ನಿಮ್ಮ ದಿನಾಚರಣೆ, ಅಂದರೆ ನವೆಂಬರ್ 14 ಮಕ್ಕಳ ದಿನ ಮಕ್ಕಳ ದಿನಾಚರಣೇನೇ ಮಂಕಾಗಿ ಹೋಯ್ತಲ್ಲ ಎಂದು ಬೇಜಾರಾ?
ಏನೂ ಬೇಜಾರು ಮಾಡ್ಕೋಬೇಡಿ...ನಿಮ್ಮ ಪಬ್ಲಿಕ್ ನೆಕ್ಸ್ಟ್ ಮಕ್ಕಳ ದಿನಾಚರಣೆಗಾಗಿ ಏರ್ಪಡಿಸಿದ್ದ ಸುಂದರ ಮಕ್ಕಳ ಫೋಟೊ ಸ್ಪರ್ಧೆ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ.
ಸ್ಪರ್ಧೆಗಾಗಿ ನವೆಂಬರ್ 13 ರವರೆಗೆ ಫೋಟೋ ಕಳಿಸಲು ಕೇಳಿಕೊಂಡಿದ್ವಿ. ಕೇವಲ ನಾಲ್ಕು ದಿನಗಳಲ್ಲಿ ನೂರು ನೂರು ಫೋಟೊಗಳು ನಮ್ಮ ವಾಟ್ಸಪ್ ದಲ್ಲಿ ಬಂದಿವೆ. ದೀಪಾವಳಿ ಭರಾಟೆಯಲ್ಲಿ ಮಕ್ಕಳ ದಿನಾಚರಣೆ ಸಪ್ಪೆಯಾಗಬಾರದೆಂದು ನಾವು ತಡೆಹಿಡಿದಿದ್ದೆವು. ಈಗ ಬಂದ ನೂರಾರು ಫೋಟೊಗಳಲ್ಲಿ ಆಯ್ದ ಕೆಲವೇ ಕೆಲವು ಫೊಟೊಗಳ ವಿಡಿಯೋ ಮಾಡಿ ಹಾಕಿ ಪುಟಾಣಿಗಳನ್ನು ಪ್ರೋತ್ಸಾಹಿಸಿದ್ದೇವೆ.
ಇವುಗಳಲ್ಲಿಯೇ ಮೂರು ಪುಟಾಣಿಗಳ ಪೋಟೊಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಕ್ಕೆ ಆಯ್ಕೆಯಾಗಿವೆ. ಶೀಘ್ರದಲ್ಲಿಯೆ ಬಹುಮಾನಿತ ಪುಟಾಣಿಗಳ ವಿವರಗಳೊಂದಿಗೆ ಫೋಟೊಗಳನ್ನು ನಿಮ್ಮ PublicNext ದಲ್ಲಿ ಪ್ರಕಟಿಸಿ ಬಹುಮಾನಗಳನ್ನು ಆಯಾ ಮಕ್ಕಳಿಗೆ ತಲುಪಿಸುತ್ತೇವೆ. ಇನ್ನೊಂದರೆಡು ದಿನ ಕಾಯಬೇಕಷ್ಟೇ.
Kshetra Samachara
18/11/2020 08:59 pm