ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂರು ದಿನಗಳ ಉದ್ಯಮಶೀಲತಾ ಪ್ರೇರಣಾ ಶಿಬಿರ ಉದ್ಘಾಟನೆ

ಧಾರವಾಡ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಸಿಡಾಕ್ ಕೇಂದ್ರ ಮತ್ತು ಪ್ರಿಸಮ್ ಕಾಂಪಿಟೆಟಿವ್ ಅಕಾಡೆಮಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಡೆಟಾ ಎಂಟ್ರಿ ಆಪರೇಟರ್ ಹಾಗೂ ಜೂನಿಯರ್ ಸಾಫ್ಟ್‌ವೇರ ಡೆವೆಲಪ್‍ರ್ಸ್ ತರಬೇತಿ ಅಭ್ಯರ್ಥಿಗಳಿಗೆ ಪ್ರಿಸಮ್ ಕಾಂಪಿಟೆಟಿವ್ ಅಕಾಡೆಮಿಯಲ್ಲಿ ಮೂರು ದಿನಗಳ ಉದ್ಯಮಶೀಲತಾ ಪ್ರೇರಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಇಂದು ಪ್ರಿಸಮ್ ಕಾಂಪಿಟೆಟಿವ್ ಅಕಾಡೆಮಿಯಲ್ಲಿ ಶಿಬಿರ ಉದ್ಘಾಟಿಸಿ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಕೆ.ತಿಮ್ಮನಗೌಡರ ಮಾತನಾಡಿ, ವಿದ್ಯಾವಂತ ನಿರುದ್ಯೋಗಿಗಳು ವಿವಿಧ ಇಲಾಖೆಗಳ ನೀಡುವ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ತರಬೇತಿಗಳ ಸಂಪೂರ್ಣ ಲಾಭ ಪಡೆದು ಸ್ವ-ಉದ್ಯೋಗ ಪ್ರಾರಂಭಿಸಬೇಕು ಎಂದು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದಣ್ಣ ಟಿ. ಮಾತನಾಡಿ, ಸ್ವ-ಉದ್ದಿಮೆ ಮಾಡಬಯಸುವ ಅಭ್ಯರ್ಥಿಗಳಿಗೆ ಇಲಾಖೆಯಿಂದ ನೀಡುವ ಪರವಾನಿಗೆ ಹಾಗೂ ವಿವಿಧ ಹಣಕಾಸು ಸವಲತ್ತುಗಳ ಬಗ್ಗೆ ವಿವರಿಸಿದರು.

ಸಿಡಾಕ್‍ನ ಜಂಟಿ ನಿರ್ದೇಶಕ ಚಂದ್ರಶೇಖರ. ಎಚ್.ಅಂಗಡಿ ತರಬೇತಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕೌಶಲ್ಯಭಿವೃದ್ದಿ ಅಧಿಕಾರಿ ಡಾ.ಚಂದ್ರಪ್ಪ, ಸಿಡಾಕ್ ನಿರ್ದೇಶಕ ಬಸವರಾಜ ಎಂ.ಗೋಟುರ ಉಪಸ್ಥಿತರಿದ್ದರು. ಸಿಡಾಕ್ ತರಬೇತುದಾರ ಮೌನೇಶ.ಆರ್.ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ರೋಹಿಣಿ ಘಂಟಿ ವಂದಿಸಿದರು. ಪ್ರವೀಣ ದೇಶಪಾಂಡೆ ಮತ್ತು ರಶ್ಮಿ ಛಡ್ಡಾ ತಾಂತ್ರಿಕ ತರಬೇತಿಗಳನ್ನು ನೀಡಿದರು.

Edited By : PublicNext Desk
Kshetra Samachara

Kshetra Samachara

20/09/2022 09:27 pm

Cinque Terre

8.19 K

Cinque Terre

0

ಸಂಬಂಧಿತ ಸುದ್ದಿ