ಧಾರವಾಡ: ಮಹಿಳಾ ಅಭ್ಯರ್ಥಿಗಳು ಕಷ್ಟದ ಪರಿಸ್ಥಿತಿಯಲ್ಲಿಯೂ ಕೂಡ ತಾಳ್ಮೆಯನ್ನು ಹೊಂದಿರಬೇಕು. ಉದ್ಯೋಗದಲ್ಲಿ ನಷ್ಟ ಅನುಭವಿಸಿದರೆ ಎದೆಗುಂದದೇ ಧೈರ್ಯವಾಗಿ ಮುನ್ನುಗ್ಗಬೇಕು ಎಂದು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಹೇಳಿದರು.
ಕೌಶಾಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಪರಿಶಿಷ್ಠ ಪಂಗಡದ ಮಹಿಳಾ ಅಭ್ಯರ್ಥಿಗಳಿಗೆ 10 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನವನಗರದ ಹುಬ್ಬಳ್ಳಿ ಶಾಖೆಯ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕಿ ವಿಜಯಲಕ್ಷ್ಮೀ ಇಟಿ ಮಾತನಾಡಿ, ಬ್ಯಾಂಕಿನ ಸಾಲ ಯೋಜನೆಗಳು, ಸರ್ಕಾರಿ ಸಾಲ ಯೋಜನೆಗಳು ಸಾಲ ಪಡೆಯುವ ಮುನ್ನ ಅನುಸರಿಸಬೇಕಾದ ವಿಧಾನಗಳು ಬಗ್ಗೆ ವಿವರಿಸಿದರು. ಆರ್ಥಿಕವಾಗಿ ಲಾಭವಾಗುವಂತಹ ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಬ್ಯಾಂಕಿಗೆ ಸಂಪರ್ಕಿಸಿದಾಗ ಅವಶ್ಯವಿರುವ ಸಾಲವನ್ನು ನೀಡುವುದಾಗಿ ಭರವಸೆ ಕೊಟ್ಟರು.
ಸಿಡಾಕ್ ಜಂಟಿ ನಿರ್ದೇಶಕ ಚಂದ್ರಶೇಖರ ಹೆಚ್.ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಿಡಾಕ್‍ನ ನಿರ್ದೇಶಕ ಬಸವರಾಜ ಎಂ.ಗೋಟೂರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದಣ್ಣ ಟಿ., ಚಂದ್ರಶೇಖರ ನೂಲ್ವಿ, ಭಾರತಿ ಟಪಾಲ, ಪ್ರವೀಣ ದೇಶಪಾಂಡೆ ಅವರು ಉಪಸ್ಥಿತರಿದ್ದರು.
Kshetra Samachara
13/09/2022 07:09 pm