ಧಾರವಾಡ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಧಾರವಾಡ ಜಿಲ್ಲೆಯ 2022-23 ನೇ ಸಾಲಿಗಾಗಿ ವಿವಿಧ ತಾಲೂಕುಗಳ ತಾಲೂಕಾಮಟ್ಟದ ದಸರಾ ಕ್ರೀಡಾಕೂಟವನ್ನು ಆಗಸ್ಟ್ 29 ರಿಂದ ಸೆಪ್ಟೆಂಬರ್ 3 ರವರೆಗೆ ಆಯೋಜಿಸಿದೆ.
ಆಗಸ್ಟ್ 29 ರಂದು ನವಲಗುಂದ ತಾಲೂಕಿನ ಮೊರಬ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ, ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದ ಬೂದನಗುಡ್ಡ ಪ್ರೌಢಶಾಲೆ, ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಪಂಡಿತ್ ನೆಹರು ಪ್ರೌಢಶಾಲೆಗಳಲ್ಲಿ, ಸೆಪ್ಟೆಂಬರ್ 1 ರಂದು ಅಣ್ಣಿಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1 ಹಾಗೂ ಸೆಪ್ಟೆಂಬರ್ 3 ರಂದು ಕುಂದಗೋಳದ ಜೆಎಸ್‍ಎಸ್ ವಿದ್ಯಾಪೀಠದಲ್ಲಿ ಕ್ರೀಡಾಕೂಟಗಳು ನಡೆಯಲಿವೆ. ದಸರಾ ಕ್ರೀಡಾ ಕೂಟದಲ್ಲಿ ನಡೆಯುವ ಅಥ್ಲೆಟಿಕ್ಸ್ ಸ್ಪರ್ಧೆಗಳು, ಗುಂಪು ಸ್ಪರ್ಧೆಗಳ ಕ್ರೀಡಾಕೂಟದಲ್ಲಿ ಪುರುಷರು ಹಾಗೂ ಮಹಿಳೆಯರು ಭಾಗವಹಿಸಬಹುದು.
ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ತಮ್ಮ ತಾಲೂಕಿನ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಮಾತ್ರ ಭಾಗವಹಿಸುವುದು. ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಆಧಾರ ಕಾರ್ಡನ್ನು ತರುವುದು ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹಾಕಿ ತರಬೇತುದಾರ ಚಂದ್ರಶೇಖರ ನಾಯ್ಕರ-9538462597, ಬಾಸ್ಕೆಟಬಾಲ್ ತರಬೇತುದಾರ ಪಿ.ಕೆ.ಹಾಸನ-8147818658, ಕುಸ್ತಿ ತರಬೇತುದಾರ ಶಿವಪ್ಪಾ ಎಸ್.ಪಾಟೀಲ-9535314382, ಮುತ್ತಪ್ಪ ತಮದಡ್ಡಿ-9535330378 ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
26/08/2022 10:11 pm