ಧಾರವಾಡ: ತೋಟಗಾರಿಕೆ ಇಲಾಖೆಯು ಧಾರವಾಡ ಜಿಲ್ಲೆಯ ರೈತರಿಗೆ ಹಾಗೂ ಅವಳಿ ನಗರದ ಜನತೆಗೆ, ಉದ್ಯಾನ ಹಾಗೂ ಕೈತೋಟ ಪ್ರೀಯರಿಗೆ ಅನುಕೂಲವಾಗುವಂತೆ ಜುಲೈ 29ರಿಂದ ಆಗಸ್ಟ್ 1 ರವರೆಗೆ ಸಸ್ಯಸಂತೆ ಕಾರ್ಯಕ್ರಮವನ್ನು ಆಯೋಜಿಸಿದೆ.
ತೋಟಗಾರಿಕೆ ಇಲಾಖೆಯ ಕ್ಷೇತ್ರ, ನರ್ಸರಿಗಳಲ್ಲಿ ಅಭಿವೃದ್ಧಿ ಪಡಿಸಿದ ವಿವಿಧ ಜಾತಿಯ ಹಣ್ಣಿನ, ಹೂವಿನ ಹಾಗೂ ಅಲಂಕಾರಿಕ ಕಸಿ-ಸಸಿಗಳನ್ನು ನಿಗದಿ ಪಡಿಸಿದ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು.
ಸಸ್ಯಸಂತೆ ಕಾರ್ಯಕ್ರಮದಲ್ಲಿ ದ್ವಿವಾಟೆ ಮಾವು-ಆಪುಸ ತಳಿ, ಪೇರಲ-ಎಲ್49 ತಳಿ, ತೆಂಗು-ಟಿಎಕ್ಸ್‍ಡಿ ಕುಬ್ಜ ತಳಿ, ತೆಂಗು ಅರಿಸಿಕೆರೆ ಟಾಲ್, ವಾಟರ್ ಆ್ಯಪಲ್, ಪಪ್ಪಾಯ, ಲಿಂಬು, ನುಗ್ಗೆ, ಕರಿಬೇವು, ದಾಸವಾಳ, ಡಾಲಿಯಾ, ಗುಲಾಬಿ, ಸೈಪ್ರಸ್, ತುಜಾ, ಮಲ್ಟಿವಿಟಾಮಿನ ಪ್ಲಾಂಟ್, ಔಷಧಿಯ ಸಸ್ಯಗಳು, ಒಳಾಂಗಣ ಮತ್ತು ಹೊರಾಂಗಣದಲ್ಲಿ ಬೆಳೆಯುವ ವಿವಿಧ ರೀತಿಯ ಸಸಿಗಳು ಹಾಗೂ ವಿವಿಧ ಜಾತಿಯ ಹೂವಿನ ಹಾಗೂ ಅಲಂಕಾರಿಕ ಗಿಡಗಳು ಲಭ್ಯವಿರುತ್ತವೆ ಎಂದು ತೋಟಗಾರಿಕಾ ಉಪನಿರ್ದೇಶಕ ಕೆ.ಸಿ ಭದ್ರಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
28/07/2022 10:06 pm