ಧಾರವಾಡ: ಕರ್ನಾಟಕ ಸರ್ಕಾರವು ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಸಹಯೋಗದೊಂದಿಗೆ ರಾಜ್ಯದ 150 ಸರ್ಕಾರಿ ಐಟಿಐ ಕೇಂದ್ರಗಳನ್ನು ತಾಂತ್ರಿಕ ಕೇಂದ್ರಗಳನ್ನಾಗಿ ಪರಿವರ್ತಿಸಿದೆ. ಉನ್ನತೀಕರಿಸಲಾದ ಈ ತಾಂತ್ರಿಕ ಕೇಂದ್ರಗಳನ್ನು ಇಂದು ಪ್ರಧಾನ ಮಂತ್ರಿಗಳಿಂದ ಆನ್‍ಲೈನ್ ಮೂಲಕ ಲೋಕಾರ್ಪಣೆಗೊಳಿಸಲಾಯಿತು.
ರಾಜ್ಯದಾದ್ಯಂತ ಕೈಗಾರಿಕೆ ತಂತ್ರಜ್ಞಾನಕ್ಕೆ ಅತ್ಯವಶ್ಯವಾದ ನುರಿತ ಮಾನವ ಸಂಪನ್ಮೂಲ ಒದಗಿಸುವ ದಿಸೆಯಲ್ಲಿ ಉನ್ನತೀಕರಿಸಲಾಗಿರುವ ಮತ್ತು ಆನ್‍ಲೈನ್ ಮೂಲಕ ಪ್ರಧಾನಮಂತ್ರಿಗಳಿಂದ ಲೋಕಾರ್ಪಣೆಯಾದ ಧಾರವಾಡ ಐಟಿಐ ಕೇಂದ್ರದ ಕಾರ್ಯಕ್ರಮವನ್ನು ಮಧ್ಯಾಹ್ನ 1.30 ಗಂಟೆಗೆ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಮುಮ್ಮಿಗಟ್ಟಿ ಗ್ರಾ.ಪಂ ಅಧ್ಯಕ್ಷ ವಿಠ್ಠಲ ಬಟ್ಟಂಗಿ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಸಂಸ್ಥೆಯ ಪ್ರಾಚಾರ್ಯ ರವಿಂದ್ರ ದ್ಯಾಬೇರಿ ಮತ್ತು ಎಲ್ಲ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Kshetra Samachara
20/06/2022 07:49 pm