ಧಾರವಾಡ: ಹೊಲದಲ್ಲಿ ರೆಂಟೆ ಹೊಡೆಯುವ ಸಂದರ್ಭದಲ್ಲಿ ಟ್ರ್ಯಾಕ್ಟರ್‌ಗೆ ಬೆಂಕಿ ತಗುಲಿ ಹೊಲದಲ್ಲೇ ಟ್ರ್ಯಾಕ್ಟರ್ ಹೊತ್ತಿ ಉರಿದ ಘಟನೆ ನವಲಗುಂದ ತಾಲೂಕಿನ ಜಾವೂರು ಗ್ರಾಮದಲ್ಲಿ ಶನಿವಾರ ನಡೆದಿದೆ.
ಜಾವೂರು ಗ್ರಾಮದ ಶೇಖಪ್ಪ ಬೆಳಹಾರ ಎಂಬುವವರಿಗೆ ಸೇರಿದ ಟ್ರ್ಯಾಕ್ಟರ್ ಹೊತ್ತಿ ಉರಿದಿದೆ. ಹೊಲದಲ್ಲಿ ರೆಂಟೆ ಹೊಡೆಯುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಬೆಂಕಿ ತಗುಲಿದೆ. ಇದರಿಂದ ನೋಡ ನೋಡುತ್ತಿದ್ದಂತೆಯೇ ಬೆಂಕಿ ಇಡೀ ಟ್ರ್ಯಾಕ್ಟರ್‌ಗೆ ಆವರಿಸಿದ್ದು, ರೈತರು ಏನೂ ಮಾಡಲಾಗದಂತ ಪರಿಸ್ಥಿತಿಯಲ್ಲಿದ್ದರು.
Kshetra Samachara
07/05/2022 09:59 pm