ಹುಬ್ಬಳ್ಳಿ: ರಸ್ತೆಬದಿ ಹೊರಟಿದ್ದ ಶಿಕ್ಷಕಿಯನ್ನು ತಡೆದು, ಪ್ರೀತಿಸುವಂತೆ ಪೀಡಿಸುತ್ತ ಕೈಹಿಡಿದು ಎಳೆದಾಡಿದ ಘಟನೆಗೆ ಸಂಬಂಧಿಸಿದಂತೆ ಯುವಕನನ್ನು ನವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಮರಗೋಳದ ಕೆರಿ ಓಣಿ ನಿವಾಸಿ ಮಹ್ಮದ್ ಯಾಸೀನ್ ಖಾಜಾಮೈನುದ್ದೀನ್ ಮುಲ್ಲಾ ( 28 ) ಆರೋಪಿ, ಈತ ಖಾಸಗಿ ಶಾಲೆಯ ಶಿಕ್ಷಕಿಯನ್ನು ಹಿಂಬಾಲಿಸುತ್ತಿದ್ದ , ನಾನು ನಿನ್ನ ಪ್ರೀತಿಸುತ್ತಿದ್ದೇನೆ. ಮೊಬೈಲ್ ನಂಬರ್ ಕೊಡು ಎಂದು ಪೀಡಿಸುತ್ತಿದ್ದ. ಕೆಲ ದಿನಗಳ ಹಿಂದೆ ಶಿಕ್ಷಕಿಯನ್ನು ತಡೆದ ಯಾಸೀನ್ , ಆಕೆಯ ಕೈಹಿಡಿದು ಎಳೆದಾಡಿದ್ದಾನೆ.
ಬಳಿಕ ರಾತ್ರಿ ಮನೆಯ ಬಳಿ ಹೋಗಿ ಬೆದರಿಸಿದ್ದಾನೆ. ಮನೆಯ ಕಿಟಕಿಯ ಗಾಜು ಒಡೆದಿದ್ದಾನೆ ಎಂದು ಎಪಿಎಂಸಿ- ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ಬಿ.ಎಸ್. ಮಂಟೂರ ಹಾಗೂ ಸಿಬ್ಬಂದಿ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
Kshetra Samachara
01/04/2022 11:28 am