ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಶಿಕ್ಷಕ ಮತದಾರರ ನೋಂದಣಿಗೆ ಅವಕಾಶ

ಧಾರವಾಡ: ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಪಟ್ಟಂತೆ ದಿನಾಂಕ 01.11.2021 ಕ್ಕೆ ಮೊದಲು ಆರು ವರ್ಷಗಳ ಅವಧಿಯಲ್ಲಿ ಕನಿಷ್ಠ ಒಟ್ಟು ಮೂರು ವರ್ಷಗಳಷ್ಟು, ದರ್ಜೆಯಲ್ಲಿ ಪ್ರೌಢ ಶಾಲೆಗಿಂತ ಕಡಿಮೆಯಿಲ್ಲದ ಸರ್ಕಾರದಿಂದ ನಿರ್ದಿಷ್ಟಪಡಿಸಿದಂತಹ ಶೈಕ್ಷಣಿಕ ಸಂಸ್ಥೆಗಳಲ್ಲಿ ಭೋಧನಾ ವೃತ್ತಿಯಲ್ಲಿ ನಿರತರಾಗಿರುವ ಅರ್ಹ ಶಿಕ್ಷಕ ಮತದಾರರು, ಮತದಾರರ ಪಟ್ಟಿಗಳ ನಿರಂತರ ಕಾಲೋಚಿತಗೊಳಿಸಲು ಪ್ರಜಾಪ್ರಾತಿನಿಧ್ಯ ಕಾಯ್ದೆ ಮತ್ತು ಭಾರತ ಚುನಾವಣಾ ಆಯೋಗವು ಹೊರಡಿಸಿದ ಮ್ಯಾನ್ಯುವಲ್ ಆನ್ ಎಲೆಕ್ಟೋರಲ್ ರೋಲ್-ಅಕ್ಟೋಬರ್ 2016ರ ಅಧ್ಯಾಯ 12 ರಂತೆ ನಾಮಪತ್ರಗಳ ಸ್ವೀಕೃತಿಯ ಕೊನೆಯ ದಿನಾಂಕದವರೆಗೆ ಹೆಸರು ಸೇರ್ಪಡೆಗೆ ಅವಕಾಶಗಳಿದ್ದು, ಅರ್ಹ ಶಿಕ್ಷಕ ಮತದಾರರು ನಮೂನೆ-19ರಲ್ಲಿ ದ್ವೀಪ್ರತಿಯೊಂದಿಗೆ ಸ್ವಯಂ ದೃಢಿಕರಿಸಿ, ಅರ್ಜಿಗಳನ್ನು ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೊಂದಣಾಧಿಕಾರಿಗಳು, ನಿಯೋಜಿತ ಅಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು.

ಹೆಚ್ಚಿನ ವಿವರಗಳಿಗಾಗಿ ಮುಖ್ಯ ಚುನಾವಣಾಧಿಕಾರಿಗಳು, ವೆಬ್‍ಸೈಟ್ www.ceokarnataka.kar.nic.in ಭೇಟಿ ನೀಡಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಉಮೇಶ ಎಸ್. ಸವಣೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

25/03/2022 09:20 pm

Cinque Terre

6.18 K

Cinque Terre

0

ಸಂಬಂಧಿತ ಸುದ್ದಿ