ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರ ಕೆಲ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಮೃತ ದೇಸಾಯಿ ಅವರು ಭಾನುವಾರ ಚಾಲನೆ ನೀಡಿದರು.
ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದ ಉಡಚಮ್ಮದೇವಿ ಮಹಾದ್ವಾರ ನಿರ್ಮಾಣ, ಕಲ್ಲೂರು ಗ್ರಾಮದ ಮಡ್ಡಿ ರಸ್ತೆ ನಿರ್ಮಾಣ, ಎಸ್‌ಸಿ ಕಾಲೊನಿಯಲ್ಲಿ ಪಕ್ಕಾ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಅಲ್ಲದೇ ಕಲ್ಲೂರು ಗ್ರಾಮದಲ್ಲಿ ದುರಸ್ಥಿಗೊಳಿಸಲಾದ ಶಾಲಾ ಕೊಠಡಿಯನ್ನೂ ಶಾಸಕರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.
ಕೊಟಬಾಗಿ ಗ್ರಾಮದಿಂದ ದೊಡವಾಡ ಹಾಗೂ ಗುಡಕಟ್ಟಿಗೆ ಸೇರುವ ರಸ್ತೆ ನಿರ್ಮಾಣಕ್ಕೂ ಶಾಸಕರು ಭೂಮಿಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೋಟೂರು ಗ್ರಾಮದ ರೈತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಕೋಟೂರು ಗ್ರಾಮದಲ್ಲಿ ಜೈ ಜವಾನ್ ಜೈ ಕಿಸಾನ್ ಗೆಳೆಯರ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಕ್ರೀಡಾಕೂಟ ಸ್ಪರ್ಧೆಗೆ ಚಾಲನೆ ನೀಡಿದ ಶಾಸಕರು, ತಡಕೋಡ ಗ್ರಾಮದಲ್ಲಿ ಎಸ್‌ಸಿ ಕಾಲೊನಿಯಲ್ಲಿ ಪಕ್ಕಾ ಗಟಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ನಂತರ
ಗರಗದ ಮಡಿವಾಳೇಶ್ವರ ಕಲ್ಮಠದ ಹತ್ತಿರ ನಡೆಯುತ್ತಿರುವ ತುಪ್ಪರಿ ಹಳ್ಳದ ಕಾಮಗಾರಿ ವೀಕ್ಷಣೆ ಕೂಡ ಮಾಡಿದರು.
Kshetra Samachara
21/03/2022 04:07 pm