ಹುಬ್ಬಳ್ಳಿ : ಫೇಸಬುಕ್ ಮಾರ್ಕೆಟ್ ಪ್ಲೇಸ್‌ನಲ್ಲಿ ಹಾಕಿದ್ದ ಸೀರೆ ಜಾಹೀರಾತು ನೋಡಿ, ಅಪರಿಚಿತನೊಬ್ಬ ಸೀರೆ ಖರೀದಿಸುವುದಾಗಿ ಮಹಿಳೆಯಿಂದ 94 ಸಾವಿರ ವಂಚಿಸಿರುವ ಘಟನೆ ನಡೆದಿದೆ.
ಹೌದು,, ನಗರದ ಕವಿತಾ ಜೈನ್ ಎಂಬುವವರಿಗೆ ವಂಚಿಸಲಾಗಿದೆ. ದೂರುದಾರರು ಫೇಸಬುಕ್‌ನಲ್ಲಿ ಹಾಕಿದ್ದ ಜಾಹೀರಾತು ನೋಡಿ ಅಪರಿಚಿತ ಸೀರೆ ಖರೀದಿಸುವುದಾಗಿ ಹೇಳಿದಲ್ಲದೆ, ತಾನು ಹಣ ಹಾಕುವುದಾಗಿ ಹೇಳಿ ವ್ಯವಹಾರದ ಮಾಹಿತಿ ಪಡೆದಿದ್ದಾನೆ. ನಂತರ ಈ ಮಾಹಿತಿ ಆಧಾರದ ಮೇಲೆ ಆನ್ಲೈನ್‌ನಲ್ಲಿ ಇವರದೇ ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾನೆ. ಈ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
07/03/2022 01:17 pm