ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬುಡ್ನಾಳ ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರ ಸಾವು

ಹುಬ್ಬಳ್ಳಿ: ನಿನ್ನೆ ಭಾನವಾರದೆಂದು ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಬುಡ್ನಾಳ ಗ್ರಾಮದ ಕೆರೆಯೊಂದರಲ್ಲಿ ನಡೆದಿದೆ.

ಹಳೆ ಹುಬ್ಬಳ್ಳಿಯ ನೇಕಾರ ನಗರದ ಯುವಕರು ಎಂದು ಗುರುತಿಸಲಾಗಿದೆ. 20 ವರ್ಷದ ಆಸುಪಾಸಿನ ಯುವಕರಾಗಿದ್ದು

ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿಯಿಂದಲೆ ಅಗ್ನಿಶಾಮಕದಳದಿಂದ ಶೋಧ ಕಾರ್ಯ ನಡೆದಿದ್ದು, ಅಗ್ನಿ ಶಾಮಕ ದಳದವರು ಕತ್ತಲಲ್ಲಿ ಸಹ ಶವಗಳ ಶೋಧ ಕಾರ್ಯ ಎರಡು ಗಂಟೆಗಳ ಕಾಲ ಮಾಡಿದರು ಪ್ರಯೋಜನವಾಗಲಿಲ್ಲ.

ಈ ಘಟನೆ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಮತ್ತೆ ಶೋಧಕಾರ್ಯ ನಡೆದಿದ್ದು ಮುಂದಿನ ಅಫಡೇಟ್ಸ್‌ ನ್ನು ನೀಡಲಾಗುತ್ತದೆ.

Edited By : PublicNext Desk
Kshetra Samachara

Kshetra Samachara

07/03/2022 09:39 am

Cinque Terre

14.66 K

Cinque Terre

0

ಸಂಬಂಧಿತ ಸುದ್ದಿ