ಹುಬ್ಬಳ್ಳಿ: ಮಹಾಶಿವರಾತ್ರಿಯ ಅಂಗವಾಗಿ ಹುಬ್ಬಳ್ಳಿಯ ಗೋಕುಲ ರಸ್ತೆಯ ಶಿವಪುರ ಕಾಲೋನಿಯಲ್ಲಿ ಸಮಾಜ ಸೇವಕ ದಿ.ಸುರೇಶ ಶೇಟ್ ಅವರು ಭಕ್ತರಿಗಾಗಿ ಬೃಹತ್ ಶಿವನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಇನ್ನು ಶಿವನಿಗೆ ವಿಶೇಷ ಪೂಜೆ ಸಲ್ಲಿಸಲು ಭಕ್ತಾಧಿಗಳ ಸಾವಿರಾರೂ ಸಂಖ್ಯೆಯಲ್ಲಿ ಆಗಮಿಸಿದ್ದು, ವಿಶೇಷ ಪೂಜಾ ಪುರಸ್ಕಾರಗಳು ನಡೆಯಿತು.
ಭಕ್ತರು ಇಂದು ಮುಂಜಾನೆಯಿಂದಲೇ ಶಿವನ ಮೂರ್ತಿಗೆ ವಿಶೇಷವಾದ ಪೂಜೆ ಮಾಡುತ್ತಿದ್ದಾರೆ. ತಮ್ಮ ಇಷ್ಟಾರ್ಥಗಳನ್ನು ಪೂರೈಸುವಂತೆ ಭಕ್ತರು ಪ್ರಾರ್ಥನೆ ಮಾಡುತ್ತಿದ್ದಾರೆ. ಹಿರಿಯರು, ಮಹಿಳೆಯರು, ಮಕ್ಕಳು ಸರದಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆಯುತ್ತ, ಹರ ಹರ ಮಹಾದೇವನ ಘೋಷಣೆ ಹಾಕುತ್ತಿರುವುದು ಸಾಮಾನ್ಯವಾಗಿದೆ.
Kshetra Samachara
02/03/2022 09:37 am