ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಪಾಸ್ ಕಾಮಗಾರಿ ಪೂರ್ಣಗೊಳ್ಳುವವರೆಗೂ ಟೋಲ್ ಕಟ್ಟಬೇಡಿ: ನೀರಲಕೇರಿ

ಧಾರವಾಡ: ರಾಷ್ಟ್ರೀಯ ಹೆದ್ದಾರಿ-4 ರಲ್ಲಿನ

ಹುಬ್ಬಳ್ಳಿ, ಧಾರವಾಡ ಬೈಪಾಸ್ ದಶಪಥ ರಸ್ತೆ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು ಮತ್ತು ಕಾಮಗಾರಿಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಪಾಸ್ ರಸ್ತೆ ನಿರ್ಮಾಣ ಆದ ನಂತರ ಈ ರಸ್ತೆಯಲ್ಲಿ ಅನೇಕ ಸಾವು-ನೋವು ಸಂಭವಿಸಿವೆ.

ಹಲವು ಬಾರಿ ಸಾರ್ವಜನಿಕರ, ಸಂಘ-ಸಂಸ್ಥೆಗಳ ಮುಖಂಡರ ಹೋರಾಟ ಮತ್ತು ಸರ್ಕಾರದ ಮೇಲೆ ಒತ್ತಡ ತಂದ ಬಳಿಕ ಇದೀಗ ಕೇಂದ್ರ ಸರ್ಕಾರ ದಶಪಥ ನಿರ್ಮಾಣಕ್ಕೆ ಮುಂದಾಗಿದೆ. ಈ ಕಾಮಗಾರಿಗೆ 30 ತಿಂಗಳು ಎಂದು ನಿಗದಿ ಮಾಡಿದೆ. ಜೊತೆಗೆ ಮುಂದಿನ 5 ವರ್ಷಗಳವರೆಗೆ ನಿರ್ವಹಣೆಯ ಹೊಣೆಯನ್ನು ಗುತ್ತಿಗೆದಾರರಿಗೆ ವಹಿಸಲಿದೆ. ಈ ಕಾಮಗಾರಿಗೆ 1200 ಕೋಟಿ ರೂಪಾಯಿ ಅನುದಾನ ನೀಡಿದೆ. ಉದ್ದೇಶಿತ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣವಾಗಬೇಕು ಮತ್ತು ಕಾಮಗಾರಿ ಸಂಪೂರ್ಣ ಪಾರದರ್ಶಕ ಆಗಬೇಕು. ಈ ಕಾಮಗಾರಿಯಲ್ಲಿ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿ ಕಮೀಶನ್ ಪಡೆಯುವ ಸಾಧ್ಯತೆ ಇದ್ದು, ಸರ್ಕಾರ ಈ ಬಗ್ಗೆ ನಿಗಾವಹಿಸಬೇಕು. ಈ ಭಾಗದ ಸಂಸದರು ಆದ ಪ್ರಹ್ಲಾದ ಜೋಶಿ ಅವರು ಗಮನಹರಿಸಬೇಕು ಎಂದು ಆಗ್ರಹಿಸಿದರು.

ಕಾಮಗಾರಿ ನಿರ್ವಹಣೆಯಲ್ಲಿ ಸೇವಾ ರಸ್ತೆಯನ್ನು ನಿರ್ಮಿಸುವವರೆಗೆ ಟೋಲ್ ಶುಲ್ಕ ವಸೂಲು ನಿಲ್ಲಿಸಬೇಕು. ನಂತರ ಸರ್ಕಾರವೇ ಅನುದಾನ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಟೋಲ್ ಶುಲ್ಕ ವಸೂಲು ಮಾಡಬಾರದು.

ಹು-ಧಾ ಅವಳಿ ನಗರದ ಜನ ಕೂಡ ಟೋಲ್ ಶುಲ್ಕ ಪಾವತಿಸಬಾರದು ಎಂದು ಮನವಿ ಮಾಡಿದರು.

ಉದ್ದೇಶಿತ ಕಾಮಗಾರಿಯನ್ನು ಸಾರ್ವಜನಿಕರು ಗಮನಿಸಬೇಕು. ಯಾವುದೇ ಹಂತದಲ್ಲಿಯೂ ಕಾಮಗಾರಿ ತನ್ನ ಉದ್ದೇಶ ಈಡೇರಿಸುವಂತಾಗಬೇಕು. ಜೊತೆಗೆ ದಶಪಥ ನಿರ್ಮಾಣ ಹಂತದಲ್ಲಿ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಇನ್ನಷ್ಟು ಸಂಪೂರ್ಣ ಸೌಕರ್ಯಗಳನ್ನು ಒದಗಿಸಬೇಕು ಎಂದು ನೀರಲಕೇರಿ ಮನವಿ ಮಾಡಿದರು.

ಮಾಜಿ ಮೇಯರ ದಾನಪ್ಪ ಕಬ್ಬೇರ, ನಾಗರಾಜ ಕಿರಣಗಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Edited By : PublicNext Desk
Kshetra Samachara

Kshetra Samachara

05/02/2022 07:24 pm

Cinque Terre

8.78 K

Cinque Terre

0

ಸಂಬಂಧಿತ ಸುದ್ದಿ