ಹುಬ್ಬಳ್ಳಿ:- ಮಾಜಿ ಸ್ಪೀಕರ್ ರಮೇಶ ಕುಮಾರ್ ಅವರು ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಖಂಡನೀಯ ಕೂಡಲೇ ರಾಜ್ಯದ ಮಹಿಳೆಯರಿಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ನಾಯಕಿ ಮೇಘನಾ ಸಿಂಧೆ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಮಾತಾನಾಡಿ ಕಾಂಗ್ರೆಸ್ ಮುಖಂಡರಿಗೆ ಹೆಣ್ಣು ಮಕ್ಕಳಿಗೆ ಹೇಗೆ ಗೌರವ ನೀಡಬೇಕು ಎಂಬುದು ಗೊತ್ತಿಲ್ಲ,ಹಿರಿಯ ನಾಯಕರು ಹಾಗೂ ಮಾಜಿ ಸ್ಪೀಕರ್ ರಮೇಶ ಅವರು ಅತ್ಯಚಾರ ಖಂಡಿಸುವುದು ಬಿಟ್ಟು ಅವರೊಂದಿಗೆ ಸಹಕಾರ ಮಾಡಿ ಎಂಬ ಹೇಳಿಕೆ ಈಡಿ ಮಾನವ ಕುಲಕ್ಕೆ ಅವಮಾನ ಮಾಡಿದ ಹಾಗೇ, ಮೊದಲು ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಯಿರಿ, ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಒತ್ತಾಯ ಪೂರ್ವಕವಾಗಿ ಕ್ಷಮೆ ಬೇಡ ತಮ್ಮ ಮನಕ್ಕೆ ತಿಳಿದು ಕ್ಷಮೆ ಕೇಳಿ ಎಂದು ಒತ್ತಾಯಿಸಿದರು.
Kshetra Samachara
18/12/2021 05:53 pm