ಕಲಘಟಗಿ: ತಾಲೂಕಿನ ಮುಕ್ಕಲ ಗ್ರಾಮ ಪಂಚಾಯತನಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ನಿಮಿತ್ತ ಮಾಜಿ ಸಚಿವ ಸಂತೋಷ್ ಲಾಡ್ ಅವರು ಕೋವಿಡ್ ಸಮಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮುಕ್ಕಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರವಿ ಸೋಮಣ್ಣವರ,ಪಶು ವೈದ್ಯಾಧಿಕಾರಿ ಸುರೇಶ ಗೊಂದೆ ಮತ್ತು ಆಯುಷ್ ವೈದ್ಯ ಎಸ್ ಡಿ ಕಳಸಣ್ಣವರನ್ನು ಸನ್ಮಾನಿಸಿ ಗೌರವಿಸಿಸರು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷ ಲಿಂಗರಡ್ಡಿ ನಡುವಿನಮನಿ,ಉಪಾಧ್ಯಕ್ಷ ಶ್ರೀಕಾಂತಗೌಡ ಪಾಟೀಲ,ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಆರ್ ಪಾಟೀಲ ಹಾಗೂ ಗ್ರಾ ಪಂ ಸದಸ್ಯರು ಉಪಸ್ಥಿತರಿದ್ದರು.
Kshetra Samachara
04/10/2021 04:04 pm