ಭಾವೈಕ್ಯತೆಗೆ ಸಾಕ್ಷಿಯಾದ ದೈವೀ ಸ್ಥಳಗಳು ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನಲ್ಲಿ ಹಲವಾರು ಇವೆ. ಅದ್ರಲ್ಲಿ ಯಮನೂರ ಚಾಂಗದೇವ, ರಾಮಲಿಂಗ ಕಾಮಣ್ಣ ಸೇರಿದಂತೆ ಅಜಾತ ನಾಗಲಿಂಗ ಮಠಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ಭಾವೈಕ್ಯತೆಯನ್ನು ಎತ್ತಿ ಹಿಡಿದು ಜಗತ್ತಿಗೆ ಸಾರುತ್ತವೆ.
ಹೌದು ನವಲಗುಂದ ಪಟ್ಟಣದಲ್ಲಿನ ಶ್ರೀ ಅಜಾತ ನಾಗಲಿಂಗ ಸ್ವಾಮಿ ಮಠ ಸರ್ವ ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ. ಈ ಮಠದಲ್ಲಿ ಮುಸ್ಲಿಂ ಪಂಜಾಗಳು ಹಾಗೂ ಕ್ರೈಸ್ತ ಧರ್ಮದ ಬೈಬಲ್ ಪೂಜೆಗೊಳ್ಳುತ್ತವೆ. ಮಠದಲ್ಲಿ ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಬಾಂಧವರು ಸೇರಿ ಆಚರಿಸುತ್ತಾರೆ. ಹಾಗೇ ಶವ ಸಂಸ್ಕಾರಕ್ಕೆ ಬಳಸಿದ ಸಿದಿಗೆ ಪೂಜೆ ನಡೆಯುತ್ತೆ. ಜಾತ್ರಾ ಸಂದರ್ಭದಲ್ಲಿ ಇದೇ ಸಿದಿಗೆ ಪಲ್ಲಕ್ಕಿಯಾಗಿ ಮೆರವಣಿಗೆಯಾಗುತ್ತದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಿ ಎಂಬ ಊರಿನಲ್ಲಿ ಕ್ರಿ.ಶ. 1812ರಲ್ಲಿ ಜನಿಸಿದ್ದ ನಾಗಲಿಂಗ ಸ್ವಾಮಿಯವರನ್ನು ಪವಾಡ ಪುರುಷ ಎನ್ನುತ್ತಾರೆ. ಈಗ ಇದೇ ನಾಗಲಿಂಗ ಸ್ವಾಮೀಯವರ 141ನೇ ಆರಾಧನ ಮಹೋತ್ಸವ ಇದೇ ತಿಂಗಳ 3 ನೇ ರವಿವಾರದಂದು ಹಾಗೂ 4ನೇ ಸೋಮವಾರದಂದು ಅತೀ ವಿಜೃಂಭಣೆಯಿಂದ ನಾಗಲಿಂಗ ಸ್ವಾಮಿ ಮಠದಲ್ಲಿ ಜರುಗಲಿದೆ. ಯಾವುದೇ ಜಾತಿ ಮತ ಭೇದವಿಲ್ಲದೆ ನೂರಾರು ಭಕ್ತರು ಬಂದು ಲಕ್ಷಾಂತರ ಜನರಿಗೆ ಸಾಕಾಗುವಷ್ಟು ಭಕ್ಷ್ಯಭೋಜನಗಳನ್ನು ತಯಾರಿಸಿ, ಜಾತ್ರೆಗೆ ಬಂದವರಿಗೆ ಉಣ ಬಡಿಸುವ ಕಾರ್ಯ ಅಮೋಘವಾಗಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್, ನವಲಗುಂದ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/07/2022 06:47 pm