ಧಾರವಾಡ: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹುಬ್ಬಳ್ಳಿ-ಧಾರವಾಡ ನಡುವಿನ ರೈಲು ಸಂಚಾರದ ಅವಧಿ 20 ರಿಂದ 30 ನಿಮಿಷಕ್ಕೆ ಬರಲಿದೆ.
ಹೌದು. ಉಣಕಲ್-ಧಾರವಾಡ, ಹುಬ್ಬಳ್ಳಿ-ಉಣಕಲ್ ನಡುವಿನ ಜೋಡಿ ಹಳಿ ಮಾರ್ಗದ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ. ಹೊಸಪೇಟೆ-ವಾಸ್ಕೋ ನಡುವಿನ ಜೋಡಿ ಹಳಿ ಕಾಮಗಾರಿಯ ಭಾಗವಾಗಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಉಣಕಲ್-ಧಾರವಾಡ 16 ಕಿ. ಮೀ. ಮಾರ್ಗದ ಕಾಮಗಾರಿ ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಇತ್ತ ಹುಬ್ಬಳ್ಳಿ-ಉಣಕಲ್ ನಡುವಿನ 3 ಕಿ. ಮೀ. ಮಾರ್ಗ ಜನವರಿಯಲ್ಲಿ ರೈಲು ಸಂಚಾರಕ್ಕೆ ಸಿದ್ಧವಾಗಲಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಡುವೆ ಸಂಚಾರಿಸಲು ಸದ್ಯ 45 ನಿಮಿಷದಿಂದ 1 ಗಂಟೆ ಬೇಕಾಗುತ್ತದೆ. ಒಂದು ವೇಳೆ ಬೇರೆ ರೈಲುಗಳು ಬಂದರೆ ಕ್ರಾಸಿಂಗ್‌ಗಾಗಿ ಕಾಯಬೇಕಾಗುತ್ತದೆ. ಇದರಿಂದಾಗಿ ಪ್ರಯಾಣದ ಅವಧಿಯೂ ಹೆಚ್ಚಾಗುತ್ತದೆ. ಆದರೆ ಜೋಡಿ ಹಳಿ ಮಾರ್ಗ ಪೂರ್ಣಗೊಂಡರೆ ಅವಳಿ ನಗರಗಳ ಮಧ್ಯೆ 20 ರಿಂದ 30 ನಿಮಿಷದಲ್ಲಿ ಸಂಚಾರ ನಡೆಸಬಹುದಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.
Kshetra Samachara
04/10/2020 04:28 pm