ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಐಟಿ ಪಾರ್ಕ್ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕ್ರಮ: ಸಿದ್ದರಾಮಪ್ಪ

ಹುಬ್ಬಳ್ಳಿ :ಹುಬ್ಬಳ್ಳಿಯ ಐಟಿ ಪಾರ್ಕ್ ಸಂಕೀರ್ಣದಲ್ಲಿ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ( ಕಿಯೋನಿಕ್ಸ್) ವ್ಯವಸ್ಥಾಪಕ ನಿರ್ದೇಶಕರಾಗಿರುವ,ಹಿರಿಯ ಐಪಿಎಸ್ ಅಧಿಕಾರಿ ಎಸ್.ಎನ್.ಸಿದ್ದರಾಮಪ್ಪ ಹೇಳಿದರು.

ನಗರದ ಐಟಿ ಪಾರ್ಕಿನಲ್ಲಿರುವ ಕಿಯೋನಿಕ್ಸ್ ಕಾರ್ಯಾಲಯಕ್ಕೆ ಇಂದು ಭೇಟಿ ನೀಡಿ, ತರಬೇತಿ ಚಟುವಟಿಕೆಗಳನ್ನು ವೀಕ್ಷಿಸಿದ ಬಳಿಕ ಅವರು ಐಟಿ ಪಾರ್ಕ್ ಸಂಕೀರ್ಣದಲ್ಲಿರುವ ಐಟಿ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇತರ ಬಾಡಿಗೆದಾರರೊಂದಿಗೆ ಸಭೆ ಉದ್ದೇಶಿಸಿ ಮಾತನಾಡಿದರು.

ಕುಂದುಕೊರತೆಗಳನ್ನು ಆಲಿಸಿದ ಬಳಿಕ , ಸರ್ಕಾರವು ಹುಬ್ಬಳ್ಳಿ ಐಟಿ ಪಾರ್ಕ್ ಕಟ್ಟಡದ ಉಸ್ತುವಾರಿ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಇತ್ತೀಚೆಗೆ ಕಿಯೋನಿಕ್ಸ್ ಗೆ ವಹಿಸಿದೆ. ವಾಹನ ನಿಲುಗಡೆ, ಸ್ವಚ್ಚತೆ ನಿರ್ವಹಣೆ, ವಿದ್ಯುತ್ ಪೂರೈಕೆ, ಭದ್ರತೆ ಕುರಿತು ಸೌಲಭ್ಯಗಳ ಸುಧಾರಣೆಗೆ ಕ್ರಮ ವಹಿಸಲಾಗುವುದು.

ಐಟಿ ಪಾರ್ಕ್ ಕಟ್ಟಡಕ್ಕೆ ಒಟ್ಟಾರೆಯಾಗಿ ಹೊಸರೂಪ ನೀಡಿ , ಉತ್ತಮ ನಿರ್ವಹಣೆಗೆ ಆದ್ಯತೆ ನೀಡಲಾಗುವುದು ಎಂದರು.

ಕಿಯೋನಿಕ್ಸ್ ಸಹಾಯಕ ವ್ಯವಸ್ಥಾಪಕರಾದ ಶ್ರೀಮತಿ ಆವಟಿ, ಶೌಕತ್ ಅಲಿ ಮುಲ್ಲಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

23/11/2020 07:25 pm

Cinque Terre

9.8 K

Cinque Terre

2

ಸಂಬಂಧಿತ ಸುದ್ದಿ