ಅಣ್ಣಿಗೇರಿ: ಪಟ್ಟಣದಲ್ಲಿ ಇತ್ತೀಚಿನ ದಿನಗಳಿಂದ ಒಂದಿಲ್ಲೊಂದು ಘಟನೆಗಳು ಸಂಭವಿಸುತ್ತಿರುವುದರಿಂದ ಸಾರ್ವಜನಿಕರು ತಮ್ಮ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಮನೆಯಲ್ಲಿಯೇ ಇರುವ ಪರಿಸ್ಥಿತಿಗಳು ನಿರ್ಮಾಣವಾಗಿದೆ.
ಹೌದು, ಇದೇನಂತಿರಾ.. ಪಟ್ಟಣದಲ್ಲಿ ಕೊರೊನಾ, ಮಳೆಯ ಅವಾಂತರ ಮಾಸುವ ಮುನ್ನವೇ ಮಂಗಗಳ ಹಾವಳಿ ಹೆಚ್ಚಾಗಿ ಜನರ ಓಡಾಟಕ್ಕೆ ತುಂಬಾ ಅನಾನುಕೂಲತೆಯನ್ನುಂಟು ಮಾಡುತ್ತಿವೆ. ಬೆಳ್ಳಂಬೆಳಿಗ್ಗೆ 78ರ ವೃದ್ಧೆ ತನ್ನ ಮನೆಯ ಮುಂದೆ ಒಂಟಿಯಾಗಿ ಕುಳಿತಾಗ ಮಂಗಗಳು ದಾಳಿ ನಡೆಸಿ ವೃದ್ಧೆಯ ಮೇಲೆ ಹಲ್ಲೆ ಮಾಡಿದ ಫಟನೆ ನಡೆದಿದೆ.
ಒಂದೇ ದಿನ ಮೂರು ಜನರ ಮೇಲೆ ದಾಳಿ ಮಾಡಿ ಅಪಘಾತಕ್ಕೆ ಅವಕಾಶ ಕಲ್ಪಿಸಿದೆ. ಓರ್ವ ಮಹಿಳೆಯ ಮೈಗೆ. ಮುಖಕ್ಕೆ ಗಂಭೀರ ಗಾಯಗಳನ್ನು ಮಾಡಿ ನಾಲ್ಕು ಹೊಲಿಗೆ ಹಾಕಿಸುವಂತೆ ಮಾಡಿದೆ. ಮತ್ತೋರ್ವ ವೃದ್ಧೆಯ ಹೊಟ್ಟೆಯ ಭಾಗಕ್ಕೆ ಗಂಭೀರವಾದ ಗಾಯಗಳನ್ನು ಮಾತ್ರ ಮಾಡದೇ ಕೈ ಕಾಲುಗಳಿಗೆ ಚೂರಿ ಗಾಯಪಡಿಸಿದೆ. ಮಂಗಗಳ ಹಾವಳಿಯಿಂದ ಜನರು ಹೊರ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಮುಂದಾದರು ಸಂಭಂದಿಸಿದ ಅಧಿಕಾರಿಗಳು ಮಂಗಗಳ ಹಾವಳಿ ತಪ್ಪಿಸುವಂತೆ ಕ್ರಮಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಬೇಕೆಂದು ಸ್ಥಳೀಯರ ಆಗ್ರವಾಗಿದೆ.
Kshetra Samachara
17/10/2020 01:44 pm