ಧಾರವಾಡ: ಪಶ್ಚಿಮ ಪದವೀಧರರ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಸವರಾಜ ಗುರಿಕಾರ ಅವರ ಪರವಾಗಿ ಈರಣ್ಣ ಮುರಗೋಡ ಅವರ ತಂಡ ಇಂದು ಹಾವೇರಿ, ಗದಗ, ಧಾರವಾಡ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿತು.
ಬೊಮ್ಮಿಗಟ್ಟಿ, ದೇವಿಕೊಪ್ಪ, ಹಿರೇಹೊನ್ನಳ್ಳಿ, ಬೇಗೂರು, ತುಮರಿಕೊಪ್ಪ, ಹುಲಗಿನಕೊಪ್ಪ, ದಾಸ್ತಿಕೊಪ್ಪ, ಉಗ್ಗಿನಕೇರಿ ಗ್ರಾಮಗಳಲ್ಲಿ ಬಸವರಾಜ ಗುರಿಕಾರ ಬಗ್ಗೆ ಪದವಿಧರರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಎಸ್.ಬಿ.ಪೂಜಾರ ಅವರ ತಂಡವು ಧಾರವಾಡದ ಜೆಎಸ್ಎಸ್ ಕಾಲೇಜು, ಕಿಟೆಲ್ ಕಾಲೇಜು, ಬಾಸೆಲ್ ಮಿಷನ್ ಪ್ರಾಥಮಿಕ ಶಾಲೆ, ಬಾಸೆಲ್ ಮಿಷನ್ ಕಾಲೇಜು, ಕೆ.ಇ ಬೋರ್ಡ್ ಶಾಲೆ, ಸಮಾಜ ಕಲ್ಯಾಣ ಇಲಾಖೆ, ನೀರಾವರಿ ಇಲಾಖೆ, ಪಿಡಬ್ಲುಡಿ ಕಚೇರಿ ಗಳಲ್ಲಿ ಪ್ರಚಾರ ಕಾರ್ಯ ನಡೆಸಿತು.
ಲಾಲ್ ಸಾಬ್, ವಿಜಯಾನಂದ ಜಾಧವ್, ಕುಶಾಲ್ ಕಾಂಬ್ಳೆ ಮತ್ತು ಹನುಮಂತ ಹಿರೇಕೊಪ್ಪ ಹಾಗೂ ಇತರರು ಇದ್ದರು.
ಶಂಕರ ಗೊಡ್ಡೆಮ್ಮನವರ ತಂಡವು ಸವಣೂರು, ಶಿರಬಡಗಿ, ಯಲುವಿಗಿ, ಕಳಲಕೊಂಡ, ಚಿಲ್ಲಾಪುರ, ಅಲ್ಲಾಪುರ, ತಗ್ಗಿಹಳ್ಳಿ, ಮಣ್ಣೂರು, ನಂದಿಹಳ್ಳಿ, ಬಂಕಾಪುರ, ಮಂತ್ರೋಡಿ ಹಳ್ಳಿಗಳ ಮತ್ತು ತಾಲೂಕಿನಲ್ಲಿ ಪದವೀಧರರ ಮನೆ ಮನೆಗೆ ಹೋಗಿ ಪ್ರಚಾರ ಕಾರ್ಯ ಮಾಡಿತು.
ಈ ಸಂದರ್ಭದಲ್ಲಿ ಬಸವರಾಜ ಜವಳಗಟ್ಟಿ, ಜಗದೀಶ ಸಿದ್ಧನಗೌಡ್ರ, ಸುರೇಶ ವಿಜಾಪುರ, ಬಸವರಾಜ ಸವೂರ ಇತರರು ಇದ್ದರು.
Kshetra Samachara
09/10/2020 07:53 pm