ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ವರುಣನ ಅಬ್ಬರಕ್ಕೆ ತತ್ತರಿಸಿದ ನವಲಗುಂದ

ನವಲಗುಂದ : ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನವಲಗುಂದ ಭಾಗದ ಜನ ತತ್ತರಿಸಿ ಹೋಗಿದ್ದಾರೆ. ಇಡೀ ರಾತ್ರಿ ವರುಣ ಅಬ್ಬರಕ್ಕೆ ನವಲಗುಂದ ತಾಲ್ಲೂಕಿನ ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಿವೆ. ಉಕ್ಕಿ ಹರಿದ ಹಳ್ಳದ ನೀರು ಜನರ ನೆಮ್ಮದಿಯನ್ನು ಕಸಿದು ಕೊಂಡಿದೆ.

ಮಳೆಯ ಆರ್ಭಟಕ್ಕೆ ನವಲಗುಂದ ಭಾಗದ ಬೆಣ್ಣೆ ಹಳ್ಳ ಹಾಗೂ ತುಪ್ಪರಿಹಳ್ಳಗಳು ತುಂಬಿ ಹರಿದು, ಗ್ರಾಮಗಳಿಗೆ ನುಗ್ಗಿವೆ. ಇದರಿಂದ ಮನೆಯಲ್ಲಿ ನೆಮ್ಮದಿಯಿಂದ ಮಲಗಬೇಕಿದ್ದ ಜನರು ಜಾಗರಣೆ ಮಾಡುವಂತಾಗಿದೆ. ತಾಲ್ಲೂಕಿನ ಅರೆಕುರಹಟ್ಟಿ, ಶಿರಕೋಳ, ಮೊರಬ ಸೇರಿದಂತೆ ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿವೆ.

ಹಲವೆಡೆ ಮನೆಗಳು ಧರೆಗುರುಳಿವೆ ಎಂಬ ಮಾಹಿತಿ ಸಹ ಲಭ್ಯ ವಾಗುತ್ತಿವೆ. ಅಷ್ಟೇ ಅಲ್ಲದೆ ರೈತರು ಶೇಖರಿಸಿಟ್ಟ ದವಸ ಧಾನ್ಯಗಳು ನೀರು ಪಾಲಾಗಿವೆ. ಒಟ್ಟಾರೆ ವರುಣನ ಆರ್ಭಟಕ್ಕೆ ನವಲಗುಂದ ಭಾಗ ತತ್ತರಿಸಿ ಹೋಗಿದ್ದು, ಜನರ ಪಾಡು ಹೇಳತೀರದ್ದಾಗಿ ಹೋಗಿದೆ.

Edited By : Shivu K
Kshetra Samachara

Kshetra Samachara

11/10/2022 08:33 am

Cinque Terre

41.67 K

Cinque Terre

1

ಸಂಬಂಧಿತ ಸುದ್ದಿ