ಹುಬ್ಬಳ್ಳಿ: ಇಂದು ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಇಂದು ಸುರಿದ ಮಳೆಯಿಂದ ಬೆಣ್ಣೆಹಳ್ಳ ಮತ್ತು ಗ್ರಾಮದ ಕೆರೆ ತುಂಬಿ ಗ್ರಾಮಕ್ಕೆ ನೀರು ನುಗ್ಗಿದೆ. ಜಲಾವೃತದಿಂದ ಈ ಗ್ರಾಮ ಮುಳುಗಿದ್ದು ಟ್ರಾಕ್ಟರ್ ಕೂಡ ಕೊಚ್ಚಿ ಹೋಗಿದೆ. ಸುಮಾರು ಮನೆಗಳಿಗೆ ನೀರು ನುಗ್ಗಿವೆ. ಇನ್ನು ಗ್ರಾಮದ ಅಂಬೇಡ್ಕರ್ ನಗರದ ನೂರಾರು ಮನೆಗೆ ನೀರು ನುಗ್ಗಿದ ಪರಿಣಾಮ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಬಸವರಾಜ ಸುಂಕದ ಎಂಬುವರ ಮನೆಗೆ ನೀರು ನುಗ್ಗಿ ಗೋಡೆ ಕುಸಿದಿದೆ. ಸುರಕ್ಷತೆ ದೃಷ್ಟಿಯಿಂದ ಜಾನುವಾರುಗಳನ್ನು ಬಸ್ ನಿಲ್ದಾಣದಲ್ಲಿ ತಂದು ಇರಿಸಲಾಗಿದೆ. ನಿಲ್ದಾಣವೂ ನೀರಿನಿಂದ ಆವೃತಗೊಂಡಿದೆ. ಕೂಡಲೆ ಜಿಲ್ಲಾಡಳಿತ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಬಗೆ ಹರಿಸಬೇಕಾಗಿದೆ.
Kshetra Samachara
07/10/2022 08:19 am