ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಮಹಾಮಳೆಗೆ ಧರೆಗುರುಳಿದ ಮನೆಗಳು

ಅಣ್ಣಿಗೇರಿ: ಮಳೆರಾಯನ ಆರ್ಭಟಕ್ಕೆ ಅಣ್ಣಿಗೇರಿ ಪಟ್ಟಣ ಮತ್ತು ತಾಲೂಕಿನ ಭಾಗದಲ್ಲಿ ಸಂಪೂರ್ಣ ಪ್ರವಾಹ ಸೃಷ್ಟಿಯಾಗಿದೆ. ಧಾರಾಕಾರ ಮಳೆ ಸುರಿಯುತ್ತಿದ್ದು, ರಾತ್ರೋರಾತ್ರಿ ಅದೆಷ್ಟೋ ಮನೆಗಳು ಬೀಳುತ್ತಿವೆ. ಜನರು ವಾಸಿಸಲು ಸ್ಥಳವಿಲ್ಲದೆ ದೇವಸ್ಥಾನಗಳಲ್ಲಿ ಬಂದು ವಾಸ ಮಾಡುತ್ತಿದ್ದಾರೆ. ರಾತ್ರಿ ಜನರು ಮಲಗಬೇಕೆಂದರೆ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಮಲಗುವಂತಹ ಪರಿಸ್ಥಿತಿ ಬಂದೊದಗಿದೆ.

ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ನೂರಕ್ಕೂ ಹೆಚ್ಚು ಮನೆಗಳು ಬಿದ್ದು ಅವಾಂತರ ಸೃಷ್ಟಿಯಾಗಿದೆ. ಪಟ್ಟಣದ ಹೊರಕೇರಿ ಓಣಿ, ಹಳೆ ಅಮೃತೇಶ್ವರ ನಗರ ಕೆರೆ ಓಣಿಗಳಲ್ಲಿ ಮನೆಗಳು ಬಿದ್ದು ಸಂಪೂರ್ಣ ನೆಲಕಚ್ಚಿವೆ.

Edited By : Manjunath H D
Kshetra Samachara

Kshetra Samachara

08/09/2022 01:20 pm

Cinque Terre

12.25 K

Cinque Terre

0