ನವಲಗುಂದ: ಒಬ್ಬೊಬ್ಬರದು ಒಂದೊಂದು ಗೋಳು. ನೋಡಿ ಸರ್ ನಮ್ಮನೆಗೆ ನೀರು ಹೊಕ್ಕಿದೆ, ನಮ್ಮನೆ ಕುಸಿದು ಬಿದ್ದಿದೆ. ಹೆಸರು ಕಾಳು, ಜೋಳ, ಗೋಧಿ ಚೀಲ ಹಸಿಯಾಗಿವೆ. ಹೀಗೆ ಅಳಲು ತೋಡಿಕೊಂಡಿದ್ದು ನವಲಗುಂದ ತಾಲೂಕಿನ ಬೋಗಾನೂರು ಗ್ರಾಮದ ಜನ.
ಗದಗ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ದೊಡ್ಡಹಳ್ಳವು ಪ್ರವಾಹಮಟ್ಟ ಮೀರಿ ಹರಿದಿದೆ. ಇದರಿಂದಾಗಿ ಬೋಗಾನೂರು ಗ್ರಾಮದ ನಾಲ್ವತ್ತಕ್ಕೂ ಅಧಿಕ ಮನೆಗಳಿಗೆ ನೂರು ನುಗ್ಗಿದೆ. ಅಷ್ಟೇ ಅಲ್ಲದೆ ಹಳ್ಳದ ಸಮೀಪದಲ್ಲಿದ್ದ ಬಣವೆಗಳು ಕೊಚ್ಚಿಕೊಂಡು ಹೋಗಿವೆ. ಇನ್ನು ಬಳೆ ನೆಲ ಕಚ್ಚಿ ಹೋಗಿವೆ.
ಮತ್ತೆ ಬದುಕು ಕಟ್ಟಿಕೊಳ್ಳಲು ಸರ್ಕಾರದ ನೆರವು ಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ಬೇಗ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಒದಗಿಸಬೇಕು ಎಂದು ಬೋಗಾನೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Kshetra Samachara
07/09/2022 10:42 am