ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 28 ಕೃಷಿ ಕಾರ್ಮಿಕರನ್ನು ರಕ್ಷಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗೆ ಒಂದು ಸಲಾಮ್

ಹುಬ್ಬಳ್ಳಿ: ತಾಲೂಕಿನ ಇಂಗಳಳ್ಳಿ ಗ್ರಾಮದ ಜಮೀನಿಗೆ ಬೆಣ್ಣೆ ಹಳ್ಳ ಬಂದಾಗ ಚಿಂಚಲಿಯ ಕೂಲಿ ಕಾರ್ಮಿಕರು ಸಿಕ್ಕಿ ಹಾಕಿಕೊಂಡ ಘಟನೆ ಜರುಗಿದೆ.

ಇದರಿಂದ ಭಯಗೊಂಡ ಎಲ್ಲರೂ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಫೋನಾಯಿಸಿದ್ದಾರೆ. ತಕ್ಷಣವೇ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರಿಂದ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಕಾರ್ಯಾಚರಣೆ ಆರಂಭವಾಗಿತ್ತು. ಸುಮಾರು ಹೊತ್ತಿನ ನಂತರ 28 ಕೂಲಿ ಕಾರ್ಮಿಕರು ಹಾಗೂ ಹೊಲದ ಮಾಲೀಕರನ್ನ ರಕ್ಷಿಸಲಾಗಿದೆ.

ಇದೇ ಸಮಯದಲ್ಲಿ ಬ್ಯಾಹಟ್ಟಿ ಗ್ರಾಮದಿಂದ ಇಂಗಳಳ್ಳಿ ಗ್ರಾಮಕ್ಕೆ ಹೋಗುತ್ತಿದ್ದ ಆನಂದ ಹಿರೇಗೌಡರ ಎಂಬಾತ ನೀರಲ್ಲಿ ಕೊಚ್ಚಿ ಹೋಗಿದ್ದು, ಆತನಿಗಾಗಿ ಹುಡುಕಾಟ ಮುಂದುವರೆಸಲಾಗಿದೆ. ರಕ್ಷಣೆಗೊಳಗಾದ ಎಲ್ಲರೂ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಧನ್ಯವಾದ ಹೇಳಿದರು.

Edited By : Shivu K
Kshetra Samachara

Kshetra Samachara

30/08/2022 09:14 am

Cinque Terre

49.93 K

Cinque Terre

4

ಸಂಬಂಧಿತ ಸುದ್ದಿ