ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪೊಲೀಸ್ ಠಾಣೆಗೆ ಹಾವು ತಂದ ಭೂಪ- ಹೌಹಾರಿದ ಪೊಲೀಸಪ್ಪ

ಹುಬ್ಬಳ್ಳಿ: ಅರೆರೇ ಇವ್‌ ಯಾರ್ ಪಾ? ಏನ್ ಹಿಡ್ಕೊಂಡು ಬಂದಾನ್ ಕೈಯಾಗ ಅಂಕೊಂಡಿರಿನ್ರೀ... ಕಾಣಿಸ್ತಿಲ್ಲ ಅಂದ್ರ ಇನ್ನೊಮ್ಮೆ ಕಣ್ಣು ತೆಗೆದು ನೋಡೆ ಬಿಡ್ರಿ..

ಈ ಹಳದಿ ಟಿ ಶರ್ಟ್ ಹಾಕೊಂಡಿರುವ ಹುಡುಗ ಹುಬ್ಬಳಿ ಕಸಬಾ ಪೇಟೆ ಪೊಲೀಸ್ ಠಾಣೆಗೆ ಸಣ್ಣ ಹಾವಿನ ಮರಿ ಹಿಡಿದುಕೊಂಡ ಬಂದಿದ್ದ. ಈತನನ್ನು ನೋಡಿದ ಅಧಿಕಾರಿಗಳು ಸಿಬ್ಬಂದಿ ಕ್ಷಣ ಕಾಲ ಹೌಹಾರಿ ಬಿಟ್ಟಿದ್ರು. ಅನಾಮಿಕನ ಕೈಯಲ್ಲಿ ನಾಗಪ್ಪನ ನೋಡಿದ್ದ ಪೊಲೀಸಪ್ಪ ಮೊದಲು ಇದನ್ನ ತಗೊಂಡ್ ಹೋಗಪ್ಪ ಪುಣ್ಯಾತ್ಮ ಅಂತ ಹೇಳಿ ಆತನನ್ನ ಜಾಗ ಖಾಲಿ ಮಾಡಿಸಿದ್ದಾರೆ.

ಕುಚೇಷ್ಟೆಗೊ ಅಥವಾ ಪೊಲೀಸರ ಬಳಿ ಮಾಹಿತಿ ನೀಡಬೇಕು ಅಂತ ಏನೋ ಹಾವಿನ ಸಮೇತ ಬಂದಿದ್ದ ಯುವಕ ಕಸಬಾ ಪೇಟೆ ಪೊಲೀಸರನ್ನ ಮಾತ್ರ ಪಿಕ್ಲಾಟಕ್ಕೆ ಸಿಲುಕಿಸಿಬಿಟ್ಟಿದ್ದ.

Edited By : Shivu K
Kshetra Samachara

Kshetra Samachara

27/06/2022 10:46 pm

Cinque Terre

29.5 K

Cinque Terre

0

ಸಂಬಂಧಿತ ಸುದ್ದಿ