ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಚಿರತೆ ದಾಳಿಗೆ ತತ್ತರಿಸಿದ ತುಮರಿಕೊಪ್ಪ ಜನತೆ

ಕಲಘಟಗಿ: ಪಟ್ಟಣದ ಸಮೀಪವೇ ಇರೋ ತುಮರಿಕೊಪ್ಪ ಗ್ರಾಮದಲ್ಲಿ ಚಿರತೆ ದಾಳಿ ಮಾಡಿದೆ. ಹೊಲಗದ್ದಗಲ್ಲಿರೋ ಮನೆಗಳಲ್ಲಿಯ ನಾಯಿ,ಹಸು,ಮೇಕೆ ಮರಿಗಳು ತಿಂದು ತೇಗುತ್ತಿದೆ.

ಇದರಿಂದ ರೈತರು, ಗ್ರಾಮಸ್ಥರು ಅತೀವ ಆತಂಕದಲ್ಲಿಯೇ ಇದ್ದಾರೆ. ಅರಣ್ಯ ಇಲಾಖೆಗೂ ದೂರು ಕೊಟ್ಟಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಬಂದು ನೋಡಿ ಹೋಗ್ತಾರೆ.

ಆದರೆ, ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತಲೇ ಗ್ರಾಮಸ್ಥರು ಆರೋಪಿಸಿದ್ದಾರೆ. ಇವತ್ತು ಚಿರತೆ ಬಂದು ನಾಯಿ ಮೇಲೆ ದಾಳಿ ಮಾಡಿದೆ. ಅದನ್ನ ಕಂಡ ರೈತರು ಮತ್ತೆ ಅರಣ್ಯ ಇಲಾಖೆಗೆ ದೂರಕೊಟ್ಟಿದ್ದಾರೆ. ಶೀಘ್ರ ಚಿರತೆ ಹಿಡಿಯಿರಿ ಅಂತಲೂ ಆಗ್ರಹಿಸಿದ್ದಾರೆ.

Edited By :
Kshetra Samachara

Kshetra Samachara

06/02/2022 09:16 pm

Cinque Terre

34.31 K

Cinque Terre

0

ಸಂಬಂಧಿತ ಸುದ್ದಿ