ಧಾರವಾಡ: ಕಾಲು ಕೆದರಿ ಮೈ ನಡುಗಿಸಿ ಎದುರಾಳಿಯನ್ನು ಕಣ್ಣಲ್ಲೇ ಗುರುಗುಟ್ಟಿ ನೋಡುವ ಟಗರುಗಳು.. ಟಗರುಗಳ ಕಾದಾಟ ನೋಡಿ ಹೋ ಎಂದು ಕೂಗುವ ಪ್ರೇಕ್ಷಕರು.. ಗುಟುರು ಹಾಕಿ ಹಣೆಗೆ ಹಣೆ ಹಚ್ಚಿ ಗುದ್ದುವ ಆ ಟಗರುಗಳ ಕಾದಾಟವನ್ನು ತುದಿಗಾಲ ಮೇಲೆ ನಿಂತು ನೋಡಿದ ಜನ.. ಈ ಎಲ್ಲ ದೃಶ್ಯ ಕಂಡು ಬಂದದ್ದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ.
ಶ್ರೀಗುರು ವಿರುಪಾಕ್ಷೇಶ್ವರ ಗೆಳೆಯರ ಬಳಗದ ವತಿಯಿಂದ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ರಾಜ್ಯಮಟ್ಟದ ಟಗರಿನ ಕಾಳಗ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸ್ಪರ್ಧೆಗೆ ಕಲಘಟಗಿ, ನವಲೂರು, ಕುಂದಗೋಳ, ಇನಾಂಹೊಂಗಲ, ಶಿರೂರು ಸೇರಿದಂತೆ ಅನೇಕ ಊರುಗಳಿಂದ ಟಗರುಗಳನ್ನು ಕಾಳಗಕ್ಕಾಗಿ ತರಲಾಗಿತ್ತು. ಹಾಲು ಹಲ್ಲು, ನಾಲ್ಕು ಹಲ್ಲು ಹಾಗೂ ಐದು ಹಲ್ಲುಗಳ ಟಗರುಗಳು ಕಾಳಗದಲ್ಲಿ ಪಾಲ್ಗೊಂಡು ನೋಡುಗರ ಗಮನಸೆಳೆದವು. ಸ್ಪರ್ಧೆಯಲ್ಲಿ ವಿಜೇತವಾದ ಟಗರುಗಳಿಗೆ ಬಹುಮಾನವನ್ನೂ ನೀಡಲಾಯಿತು.
Kshetra Samachara
05/01/2022 10:31 pm