ಧಾರವಾಡ: ಕೆಲ ದಿನಗಳ ಹಿಂದಷ್ಟೇ ಬೆಂಬಿಡದೇ ಕಾಡಿದ್ದ ಅಕಾಲಿಕ ಮಳೆ ರೈತ ಸಮುದಾಯದ ನಿದ್ದೆಗೆಡಿಸಿತ್ತು. ಅದಾದ ಬಳಿಕ ತುಸು ಹೊರಪುಕೊಟ್ಟಿದ್ದ ಮಳೆ ನಿನ್ನೆ ರಾತ್ರಿಯಿಂದ ಮತ್ತೆ ಸುರಿಯುತ್ತಿದ್ದು, ರೈತ ಸಮುದಾಯ ಕಣ್ಣೀರು ಹಾಕುವಂತೆ ಮಾಡಿದೆ.
ಹೌದು! ಮೊನ್ನೆ ಮಳೆ ಸುರಿದು ಹೊರಪು ಕೊಟ್ಟ ನಂತರ ಕೃಷಿ ಚಟುವಟಿಕೆಗಳು ಗರಿಗೆದರಿದ್ದವು. ಕ್ರಿಮಿನಾಶಕ ಸಿಂಪಡಣೆ, ಎಡೆಕುಂಟೆ ಹೊಡೆಯುವುದು ಸೇರಿದಂತೆ ಇತ್ಯಾದಿ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ, ನಿನ್ನೆಯಿಂದ ಮತ್ತೆ ಮಳೆರಾಯ ತನ್ನ ಚೆಲ್ಲಾಟ ಆರಂಭಿಸಿದ್ದಾನೆ.
ಧಾರವಾಡ ನಗರದ ತಗ್ಗು ಪ್ರದೇಶಗಳಲ್ಲಿ ಮಳೆಯಿಂದ ನೀರು ಆವರಿಸಿ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ಘಟನೆಯೂ ನಡೆಯಿತು. ಈ ಅಕಾಲಿಕ ಮಳೆ ಜನರಲ್ಲಿ ಬೇಸರ ತರಿಸಿರುವುದಂತೂ ಸುಳ್ಳಲ್ಲ
Kshetra Samachara
02/12/2021 07:33 pm