ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಸಿಡಿಲು ಬಡಿದು ಎರಡು ಎಮ್ಮೆ ಸಾವು

ಅಳ್ನಾವರ: ಅಳ್ನಾವರ ತಾಲೂಕಿನ ಶಿವನಗರ ಗ್ರಾಮದಲ್ಲಿ ನಿನ್ನೆ (ಮಂಗಳವಾರ) ಸುರಿದ ಅಕಾಲಿಕ ಮಳೆಯಿಂದ ಸಿಡಿಲು ಬಡಿದು ಎರಡು ಎಮ್ಮೆಗಳು ಸಾವನ್ನಪ್ಪಿವೆ.

ಮೃತ ಎಮ್ಮೆಗಳು ಗಂಗಾರಾಮ ವಿಠಲ್ ಕೋಳಾಪಟ್ಟಿ ಅವರಿಗೆ ಸೇರಿದ್ದು, ಈ ದುರಂತದಿಂದ ರೈತ ಗಂಗಾರಾಮ ಅವರಿಗೆ ಸುಮಾರು ಒಂದು ಲಕ್ಷ ರೂ. ಮೌಲ್ಯದ ನಷ್ಟವಾಗಿದೆ.

ಶಿವನಗರ ಗ್ರಾಮದ ಜನರಿಗೆ ಹೈನುಗಾರಿಕೆಯೇ ಮೂಲ ಆದಾಯ. ಅಕಾಲಿಕ ಮಳೆ ಸಿಡಿಲಿಗೆ ಅಸುನೀಗಿದ ಜಾನುವಾರಗಳ ಘಟನೆ ಗಂಗಾರಾಮ ಅವರನ್ನು ಚಿಂತೆಗೀಡು ಮಾಡಿದೆ. ಕಳೆದ ಆರು ತಿಂಗಳ ಹಿಂದೆ ಸುರಿದ ಮಳೆಗೆ ಕಂಬಾರಗಣವಿ ಹಳ್ಳದಲ್ಲಿಯು ಸಹ ಎರಡು ಜಾನುವಾರಗಳು ಕೊಚ್ಚಿ ಹೋಗಿದ್ದವು. ಅದಕ್ಕೆ ಯಾವುದೇ ಸಾಂತ್ವನವಾಗಲಿ, ಪರಿಹಾರವಾಗಲಿ ಇದುವರೆಗೂ ದೊರೆತಿಲ್ಲ. ಇದೀಗ ಮತ್ತೆ ಎರಡು ಎಮ್ಮೆಗಳು ಸಿಡಿಲಿಗೆ ಅಸುನೀಗಿವೆ.

ಸಂಬಂಧಪಟ್ಟ ಅಧಿಕಾರಿಗಳು ಈ ಘಟನೆಯನ್ನು ಪರಿಶೀಲಿಸಿ ಅವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮಾಡಬೇಕು ಎಂದು ಹೊನ್ನಾಪುರ ಗ್ರಾ.ಪಂ ಸದಸ್ಯ ಸಂತೋಷ ಕಲಾಜ ಆಗ್ರಹಿಸಿದ್ದಾರೆ.

-ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ ಅಳ್ನಾವರ.

Edited By : Shivu K
Kshetra Samachara

Kshetra Samachara

17/11/2021 09:19 am

Cinque Terre

51.85 K

Cinque Terre

0

ಸಂಬಂಧಿತ ಸುದ್ದಿ