ಗದಗ : ಗದಗ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿಯಲ್ಲಿ 80 ಕ್ಕೂ ಹೆಚ್ಚು ಮನೆಗಳಿಗೆ ಮಳೆನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಪರಿಣಾಮ ಮಳೆರಾಯನ ಆರ್ಭಟಕ್ಕೆ ಯತ್ತಿನಹಳ್ಳಿ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ. ಮನೆಯಲ್ಲಿದ್ದ ಅಪಾರ ಪ್ರಮಾಣದ ಧವಸ ಧಾನ್ಯ,ದಿನಸಿ ಸಾಮಗ್ರಿಗಳು ಸಹ ಹಾನಿಗೊಳಗಾಗಿದ್ದು ಮಳೆ ನೀರು ಹೊರಹಾಕಲು ಗ್ರಾಮಸ್ಥರು ಪರದಾಟ ನಡೆಸಿದ್ದಾರೆ.
ಇನ್ನು ಕೆಲವರಿಗೆ ಮನೆಯಲ್ಲಿ ರಾತ್ರಿ ನಿದ್ರೆ ಮಾಡೋಕೆ ಜಾಗೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಗ್ರಾಮಸ್ಥರು ರಾತ್ರಿಯೀಡಿ ಜಾಗರಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಗ್ರಾಮದ ಹೊರವಲಯದಲ್ಲಿರೋ ಹಳ್ಳ ಕಟ್ಟಿದ ಪರಿಣಾಮ ಗ್ರಾಮಕ್ಕೆ ಮಳೆ ನೀರು ನುಗ್ಗಿ ಅವಾಂತರ ಎಬ್ಬಿಸಿದೆ.
Kshetra Samachara
23/10/2021 09:18 pm