ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳೆದ ಎರಡು ದಿನಗಳಿಂದ ಚಿರತೆ ಬಂದಿದೆ ಎಂಬ ಊಹಾಪೋಹ ಎದ್ದಿರುವ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಅವಳಿನಗರದ ಬಿ.ಆರ್.ಟಿ.ಎಸ್ ರಸ್ತೆಯಲ್ಲಿ ಚಿಗರಿ ಒಂದು ಪ್ರತ್ಯಕ್ಷ ವಾಗಿ ಅಚ್ಚರಿ ಮೂಡಿಸಿದೆ.
ಚಿಗರಿ ಕಾರಿಡಾರ್ ನಲ್ಲಿ ಚಿಗರಿಯೊಂದು ಪ್ರತ್ಯಕ್ಷವಾದ ಘಟನೆ ಸತ್ತೂರ ಎಸ್.ಡಿ.ಎಂ ಬಳಿ ಘಟನೆ ನಡೆದಿದೆ. ಚಿಗರಿ ಬಸ್ ಓಡಾಡುವ ರಸ್ತೆಯಲ್ಲಿಯೇ ಚಿಗರಿ ರನ್ನಿಂಗ್ ರೇಸ್ ಮಾಡಿದ್ದು ,ಬೈಕ್ ಸವಾರರೊಬ್ಬರು ಮೊಬೈಲ್ ನಲ್ಲಿ ಈ ದೃಶ್ಯ ಸೆರೆಹಿಡಿದಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಎರಡು ದಿನಗಳಿಂದ ಚಿರತೆ ಬಂದಿದೆ ಅನ್ನೋ ಗುಮಾನಿಯಲ್ಲಿಯೇ ಚಿಗರಿ ಬಂದು ಅಚ್ಚರಿ ಮೂಡಿಸಿದೆ.
Kshetra Samachara
17/09/2021 05:00 pm