ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾನಾಡಿಗಳ ಕಲರವದ ಪ್ರೇಮಿಗಳ ದಿನ ನಿತ್ಯವು ವಿಶೇಷ ವಿಸ್ಮಯ ಅಲ್ವೇ !

ಫೆಬ್ರವರಿ 14 ವ್ಯಾಲೆಂಟೈನ್ ಡೇ ಅದೇ ರಿ ಈ ಪ್ರೇಮಿಗಳ ದಿನಾಚರಣೆ ಬಂತಾಪ್ಪಾ ಅಂದ್ರೇ , ಎದೆ ಆಳದಲ್ಲಿ ಮೀಸಲಿಟ್ಟ ಪ್ರೀತಿ ವಿಚಾರವನ್ನು ವಿಶೇಷವಾಗಿ ಈ ದಿನವೇ ತಮ್ಮ ಪ್ರೇಮ ನಿವೇದನೆಗಳನ್ನು ಹೇಳಲು ಆತುರ, ಭಯ, ಒಳಗೊಳಗೆ ಸಂಕಟ ಇದ್ರೂ ಎಲ್ಲಿಲ್ಲದ ಧೈರ್ಯವನ್ನು ಪಡೆದು ಕೈಲೊಂದು ಆಕರ್ಷಕ ಉಡುಗೊರೆ ಹಿಡಿದು ತಮ್ಮ ಪ್ರೇಮ ನಿವೇದನೆಯನ್ನು ಪ್ರೇಯಸಿ ಮುಂದೆ ಹೇಳಿಕೊಳ್ಳುವವರು ಅನೇಕರು.

ಆದರೆ ಈ ಸಾಲಿಗೆ ನಮ್ಮ ಜೋಡಿಗಳು ಸೇರಲ್ಲಾ ಬಿಡಿ ನಮ್ಮ ಜೋಡಿಗಳು ಎಲ್ಲರಿಗಿಂತ ವಿಭಿನ್ನ ಮತ್ತು ವಿಶಿಷ್ಟ ಯಾಕೆ ಅಂದ್ರಾ ?

ನಮ್ಮ ಬಾನಾಡಿಗಳ ಜೋಡಿಗೆ ನಿತ್ಯವೂ ಪ್ರೇಮ ದಿನ, ಪ್ರೇಮ ಮಯ.

ಎಸ್ ! ನಾವು ಇಂದು ಹೇಳ ಹೊರಟಿರುವುದು ಅಂತಹ ಜೀವನ ಸಂಗಾತಿಗಳ ಬಗ್ಗೆ ಕ್ಯಾಮೆರಾ ಕಣ್ಣಂಚಲ್ಲಿ ಸೆರೆ ಹಿಡಿದ ಈ ವಿಧ ಹಕ್ಕಿಗಳ ಪ್ರೇಮದ ತುಂಟಾಟಗಳ ಸವಿ ಎಷ್ಟು ಚಂದ. ಆಹಾ ! ಆಹಾ !

ಅಂದ ಹಾಗೆ ಈ ಛಾಯಾಚಿತ್ರ ‌ಸೆರೆ ಹಿಡಿದಿದ್ದು ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಮಲೆನಾಡಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ.

ಈ ದೃಶ್ಯಗಳಲ್ಲಿ ಕಾಣ ಸಿಗುವ ಒಂದೊಂದು ಹಕ್ಕಿಯೂ ಒಂದೊಂದು ಜಾತಿಯ ಜೋಡಿ ಪಕ್ಷಿಗಳಾಗಿವೆ. ಅದರಲ್ಲಿ ಈ ಬುಲ್ ಬುಲ್ ಹಕ್ಕಿ ಹೆಸರು ನೋಡಿ ಎಷ್ಟೊಂದು ಚೆನ್ನಾಗಿದೆ ಅಲ್ವಾ… ನಾಗರಹಾವು ಸಿನಿಮಾದ ಡೈಲಾಗ್ ನೆನಪಾಗುತ್ತದೆ.

ಈ ಹಕ್ಕಿಗಳ ಸವಿನಯ ನೋಟ ನೋಡಿ ಗಿಳಿ ಜೋಡಿ, ನವಿಲು ಜೋಡಿ, ಕಂದು ಬೆಳವ ಹಕ್ಕಿಗಳ ಜೋಡಿ, ಕೆಂಪು ಮೀಸೆಯ ಪಿಕಳಾರ ಹಕ್ಕಿ, ಗೊರವಂಕ, ಕಾಡು ಗೊರವಂಕ, ಮುನಿಯಾ ಹಕ್ಕಿ, ಹದ್ದಿನ ಜೋಡಿ ಹಾಗೂ ಮಿಂಚುಳ್ಳಿ ಜೋಡಿಗಳು ಈ ಎಲ್ಲ ಹಕ್ಕಿಗಳು ಬಾನನ್ನೇ ಮನೆಯನ್ನಾಗಿಸಿ ಹಾರಾಟ ನಡೆಸಿ ಪ್ರೀತಿ ಪ್ರೇಮ ಹಂಚಿಕೊಳ್ಳುವ ದೃಶ್ಯ ಮನಮೋಹಕ ಅಲ್ವೇ.

ನೆನಪಿರಲಿ ನಾವು ಮನುಷ್ಯರ ಯಾವುದೋ ? ದಿನಕ್ಕೆ ಮೀಸಲಾಗಿ ಪ್ರೇಮಿಗಳ ದಿನ ಆಚರಿಸುವ ನಡುವೆ ಪ್ರಕೃತಿಯನ್ನು ನಾಚಿಸುವ ಈ ಪಕ್ಷಿಗಳು ನಿತ್ಯದ ಪ್ರೇಮೋತ್ಸವಕ್ಕೆ ಏನಿದೆ ಸಾಟಿ. ಅಂದಹಾಗೇ ಈ ಎಲ್ಲ ಹಕ್ಕಿ ಪಕ್ಷಿಗಳ ಜೋಡಿಗಳ ದೃಶ್ಯ ಸೆರೆ ಹಿಡಿದವ್ರು ಹವ್ಯಾಸಿ ಛಾಯಾಗ್ರಾಹಕ ಈರಪ್ಪ ನಾಯ್ಕರ.

Edited By : Manjunath H D
Kshetra Samachara

Kshetra Samachara

14/02/2021 12:07 pm

Cinque Terre

60.68 K

Cinque Terre

1

ಸಂಬಂಧಿತ ಸುದ್ದಿ