ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮಹಾ ಮಳೆಗೆ ಮನೆಗೆ ನುಗ್ಗಿದ ನೀರು,ಜನ ಜೀವನ ದುಸ್ತರ !

ಎಲ್ಲೆಡೆ ಧಾರಾಕಾರವಾಗಿ ಸುರಿಯುತ್ತಿರುವ ವರುಣದೇವನ ಆರ್ಭಟ ಕುಂದಗೋಳ ತಾಲೂಕಿನಲ್ಲಿ ಎಲ್ಲೆ ಮೀರಿದ್ದು ಇದೀಗ ಯರಗುಪ್ಪಿ ಗ್ರಾಮದ ಮನೆಗಳಿಗೆ ಸಂಪೂರ್ಣ ನೀರು ನುಗ್ಗುತ್ತಿದೆ‌.

ಮಳೆಯ ರಭಸಕ್ಕೆ ಯರಗುಪ್ಪಿ ಗ್ರಾಮದಲ್ಲಿನ ಚರಂಡಿಗಳು ಸಂಪೂರ್ಣ ಬ್ಲಾಕ್ ಆಗಿದ್ದು, ನೀರು ಹರಿಯಲು ಮಾರ್ಗವಿಲ್ಲದೆ ರಸ್ತೆ, ಮನೆ ಆವರಣ, ಮತ್ತು ಮನೆಗಳಲ್ಲಿ ನೀರು ನುಗ್ಗುತ್ತಿದ್ದು ಕುಟುಂಬಸ್ಥರು ನೀರು ತಡೆಯಲು ಹರಸಾಹಸ ಪಡುತ್ತಿದ್ರೇ ಕೆಲ ಮನೆಗಳು ಕುಸಿದು ಬಿದ್ದಿವೆ.

ಯರಗುಪ್ಪಿ ಗ್ರಾಮದ ಪ್ರತಿಯೊಂದು ರಸ್ತೆ, ಬೀದಿ, ಹಿತ್ತಲು, ಮನೆ, ಜಲಾವೃತವಾಗಿವೆ. ಈ ಅವ್ಯವಸ್ಥೆ ಬಗ್ಗೆ ಜನರು ಪಬ್ಲಿಕ್ ನೆಕ್ಸ್ಟ ಜೊತೆ ಹಂಚಿಕೊಂಡ ಅಭಿಪ್ರಾಯ ಹೀಗಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆಯಾದ್ರೇ ಇದೇ ಸಮಸ್ಯೆಯಲ್ಲಿ ಜನ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿ ಕೆಲ ಮನೆಗಳಲ್ಲಿ ಅಡುಗೆ ಮಾಡಲು ಸ್ಥಳ ಇರದಂತೆ ಮಳೆ ನೀರು ಆವರಿಸಿಕೊಳ್ಳುತ್ತದೆ.

ಈ ಬಗ್ಗೆ ಸಂಬಂಧಪಟ್ಟ ತಾಲೂಕು ಆಡಳಿತ ಗಮನಿಸಿ ಹಳ್ಳಿಗರ ಬದುಕನ್ನು ಸುಧಾರಿಸಲು ಮುಂದಾಗಬೇಕಿದೆ.

Edited By :
Kshetra Samachara

Kshetra Samachara

20/05/2022 03:26 pm

Cinque Terre

27.74 K

Cinque Terre

0

ಸಂಬಂಧಿತ ಸುದ್ದಿ