ಹುಬ್ಬಳ್ಳಿ : ಕಪ್ಪಗಿರೋ ಮೂಷ್ಯಾ ಗಳು ಒಂದಷ್ಟು ಡೇಂಜರ್. ಅವು ಕಚ್ಚೋಕೆ ಆರಂಭಿಸಿದ್ವು ಅಂದ್ರೆ, ಮನುಷ್ಯನ ಜೀವವನ್ನೂ ಬಲಿಪಡಿಯೋಷ್ಟು ಶಕ್ತಿ ಅವುಗಳಿಗಿವೆ. ಆದ್ರೆ ಇಲ್ಲೊಂದು ಕರಿ ಮಂಗ ಕಾಡು ಬಿಟ್ಟು ನಾಡು ಸೇರಿಕೊಂಡಿದೆ ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ಹೌದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬಂದಿರೋ ಈ ಮಂಗ ಹೋಟೆಲ್ ಮಾಲೀಕನಂತೆಯೇ ವರ್ತಿಸ್ತಿದೆ. ಹೋಟೆಲ್ ನ ಕೌಂಟರ್ ಬಳಿ ಕೂಡೋದು, ಅಡುಗೆ ಮನೆಯಲ್ಲಿ ಕೆಲಸ ಮಾಡೋದನ್ನು ಪರಿಶೀಲನೆ ಮಾಡೋದು ಎಲ್ಲವನ್ನು ಈ ಕೋತಿ ಗಮನಿಸುತ್ತಿದೆ.
ಹೋಟೆಲ್ ನಲ್ಲಿ ಕೊಡುವ ಪೂರಿ ಮತ್ತಿತರ ತಿಂಡಿಯನ್ನೂ ಮನುಷ್ಯರಂತೆಯೇ ಕುಳಿತು ಹಾಯಾಗಿ ಸೇವಿಸುತ್ತೆ. ನೀರು ಬೇಕಿದ್ರೆ ಟ್ಯಾಂಕ್ ಗೆ ಮುಟ್ಟಿ ತೋರಿಸುತ್ತೆ ಈ ಕೋತಿ.
ಹುಬ್ಬಳ್ಳಿಯ ಮಹಾನಗರ ಪಾಲಿಕೆ ಆವರಣದಲ್ಲಿನ ಉದ್ಯಾನವನದಲ್ಲಿ ಬೀಡು ಬಿಟ್ಟಿರುವ ಈ ಕೋತಿ ಹೋಟೆಲ್, ಅಂಗಡಿ ಇತ್ಯಾದಿಗಳ ಕಡೆ ಹೋಗಿ ತನಗೆ ಬೇಕಾದ್ದನ್ನು ಪಡೆದು ತಿನ್ನುತ್ತದೆ. ಜನ ಏನೇ ಕೊಟ್ಟರೂ ತನಗೆ ಬೇಕಾದ್ದನ್ನು ಮಾತ್ರ ತಿಂದು ಉಳಿದದ್ದನ್ನು ಅಲ್ಲಿಯೇ ಬಿಟ್ಟು ಹೋಗ್ತಿದೆ.
ಕಳೆದ ಒಂದು ವಾರದಿಂದಲೂ ಮಂಗ ಇಲ್ಲಿಯೇ ಠಿಕಾಣಿ ಹೂಡಿದೆ. ಆದರೆ ಯಾರಿಗೆ ಏನೂ ತೊಂದರೆ ಕೊಟ್ಟಿಲ್ಲ. ಸದ್ಯ ನಾಗರೀಕರು ತಮಗನಿಸಿದ್ದನ್ನು ತಿನ್ನೋಕೆ ಕೊಟ್ಟು ಮುಂದೆ ಸಾಗುತ್ತಿದ್ದಾರೆ. ಕೆಲವೊಬ್ಬರಂತೂ ಅದ್ರ ಜೊತೆ ಸೆಲ್ಫೀನೂ ಕ್ಲಿಕ್ಕಿಸಿಕೊಂಡಿದ್ದಾರೆ.
Kshetra Samachara
03/07/2022 08:06 pm