ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಮಳೆ ಬಂತೆಂದು ಮರದ ಆಸರೆಗೆ ಬಂದರೆ 13 ಕುರಿಗಳು ಬಲಿಯಾಗ ಬೇಕೆ?

ಗದಗ : ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲು ಬಡಿದು 13 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ತಾಂಡಾದಲ್ಲಿ ಸಂಭವಿಸಿದೆ.

ಡೋಣಿ ತಾಂಡದ ನಿವಾಸಿ ಶರಣಪ್ಪ ಹಾಗೂ ಸೋಮಪ್ಪ ಚವ್ಹಾಣ್ ಎಂಬುವರಿಗೆ ಸೇರಿದ ಕುರಿಗಳು ಸಿಡಿಲಿಗೆ ಸಾವನ್ನಪ್ಪಿವೆ.

ಮಳೆ ಬಂದ ಹಿನ್ನಲೆ ಮರದ‌ ಕೆಳಗೆ ಆಸರೆಗೆಂದು ಕುರಿಗಳ ಹಿಂಡು ಹೊರಟಿತ್ತು.ಈ‌ ವೇಳೆ ಮರಕ್ಕೆ ಸಿಡಿಲು ಬಡಿದು ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳು ಕಣ್ಣೆದುರಿಗೇನೆ ಸಾವನ್ನಪ್ಪಿವೆ.

ಈ ಘಟನೆಯಿಂದ ಕುರಿಗಾಹಿಗಳು ಕಂಗಾಲಾಗಿದ್ದು ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪಿಡಿಓ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nagesh Gaonkar
Kshetra Samachara

Kshetra Samachara

23/10/2021 09:27 pm

Cinque Terre

74.39 K

Cinque Terre

7

ಸಂಬಂಧಿತ ಸುದ್ದಿ