ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಪ್ರವಾಹದಲ್ಲಿ ಸಿಲುಕಿದ ಒಂದೇ ಕುಟುಂಬದ ಮೂವರ ರಕ್ಷಣೆ

ನವಲಗುಂದ : ಸುರಿದ ಭಾರಿ ಮಳೆಗೆ ನವಲಗುಂದ ತಾಲೂಕಿನ ಖನ್ನೂರ ಗ್ರಾಮದಲ್ಲಿನ ದೊಡ್ಡ ಹಳ್ಳ ಉಕ್ಕಿ ಹರಿದಿದೆ. ಇದರಿಂದಾಗಿ ಬೆಳಗಿನ ಜಾವ ನಾಲ್ಕು ಗಂಟೆಗೆ ಮೂವರು ಪ್ರವಾಹಕ್ಕೆ ಸಿಲುಕಿದ್ದರು. ತಾಲೂಕಾ ಆಡಳಿತದ ವತಿಯಿಂದ ಮೂವರ ರಕ್ಷಣಾ ಕಾರ್ಯ ಯಶಸ್ವಿಯಾಗಿ ನಡೆಸಲಾಗಿದೆ.

ನವಲಗುಂದ ಭಾಗದಲ್ಲಿ ಹರಿಯುವ ಹಳ್ಳಗಳು ಭಾರಿ ಪ್ರಮಾಣದಲ್ಲಿ ನೀರನ್ನು ಹೊರ ಹಾಕುತ್ತಿವೆ. ಇದರ ಪರಿಣಾಮ ಮಂಗಳವಾರ ಮುಂಜಾನೆ ನಾಲ್ಕು ಗಂಟೆಗೆ ಒಂದೇ ಕುಟುಂಬದ 25 ವರ್ಷ ವಯಸ್ಸಿನ ಮಂಜುನಾಥ ತಳವಾರ, 22 ವರ್ಷ ವಯಸ್ಸಿನ ಹಣಮಂತ ತಳವಾರ, 55 ವರ್ಷ ವಯಸ್ಸಿನ ನಾಗಪ್ಪ ತಳವಾರ ಎಂಬುವವರು ಪ್ರವಾಹದಲ್ಲಿ ಸಿಲುಕಿದ್ದರು.

ಪ್ರವಾಹದ ನೀರು ಉರೊಳಕ್ಕೆ ನುಗ್ಗಿದ ಪರಿಣಾಮ ಮನೆ ಸಂಪೂರ್ಣ ಜಲಾವೃತಗೊಂಡ ಹಿನ್ನೆಲೆ ಮೂವರು ಮನೆ ಏರಿ ಕೂತಿದ್ದರು. ಇವರನ್ನು ತಾಲೂಕಾ ಆಡಳಿತದಿಂದ ತಹಶೀಲ್ದಾರ್ ಅನೀಲ ಬಡಿಗೇರ್ ನೇತೃತ್ವದಲ್ಲಿ ಅಗ್ನಿ ಶಾಮಕ ದಳ, ಸಿಪಿಐ ಹಾಗೂ ಪೊಲೀಸ್ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ನಡೆಸಿ, ರಕ್ಷಿಸಲಾಯಿತು.

Edited By : Manjunath H D
Kshetra Samachara

Kshetra Samachara

06/09/2022 05:25 pm

Cinque Terre

33.6 K

Cinque Terre

0

ಸಂಬಂಧಿತ ಸುದ್ದಿ