ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇವರ ಮನೆಯ ಮೇಲ್ಛಾವಣಿಯೇ ಸುಂದರ ಗಾರ್ಡನ್

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಪ್ರತಿಯೊಬ್ಬರಿಗೂ ಒಂದಿಲ್ಲೊಂದು ರೀತಿಯಲ್ಲಿ ಹವ್ಯಾಸಗಳಿರುತ್ತವೆ. ನಾಣ್ಯಗಳನ್ನು ಸಂಗ್ರಹಿಸುವುದು, ಅಂಚೆ ಪತ್ರಗಳನ್ನು ಸಂಗ್ರಹಿಸುವುದು, ಪ್ರಾಣಿ, ಪಕ್ಷಿಗಳನ್ನು ಸಾಕುವುದು ಹೀಗೆ ಅನೇಕ ಹವ್ಯಾಸಗಳನ್ನು ರೂಢಿಸಿಕೊಂಡ ಅನೇಕರು ನಮ್ಮ ಮಧ್ಯೆ ಇದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ತಾವು ಶಿಕ್ಷಕ ಸೇವೆಯಿಂದ ನಿವೃತ್ತಿಯಾದರೂ ಕೂಡ ಪರಿಸರದ ಮೇಲಿರುವ ಕಾಳಜಿಯಿಂದ ತಮ್ಮ ಮನೆಯ ಮೇಲ್ಛಾವಣಿಯನ್ನೇ ಸಣ್ಣ ಕೈತೋಟವನ್ನಾಗಿ ಮಾಡಿಕೊಂಡಿದ್ದಾರೆ.

ಹೌದು! ಹೀಗೆ ಸಸಿಗಳಿಗೆ ನೀರುಣಿಸುತ್ತಿರುವ ದಂಪತಿ ಹೆಸರು ಗಂಗಯ್ಯ ಹಾಗೂ ಮಮತಾ ಹಿರೇಮಠ. ಇವರು ಧಾರವಾಡದ ಆಕಾಶವಾಣಿ ಹತ್ತಿರದ ನಿವಾಸಿಗಳು. ಗಂಗಯ್ಯ ಹಿರೇಮಠ ಅವರು ನಿವೃತ್ತ ಶಿಕ್ಷಕರಾದರೂ ಕೂಡ ವಿವಿಧ ಜಾತಿಯ ಸಸಿಗಳನ್ನು ತಮ್ಮ ಮನೆಯ ಮೇಲ್ಭಾಗದಲ್ಲೇ ಹಚ್ಚಿ ತಮ್ಮದೇ ಆದ ಸುಂದರ ಗಾರ್ಡನ್ ಮಾಡಿಕೊಂಡಿದ್ದಾರೆ. ಸುಮಾರು 300ಕ್ಕೂ ಅಧಿಕ ಜಾತಿಯ ಸಸಿಗಳನ್ನು ನೆಟ್ಟು ಪರಿಸರದ ಸುಖ ಅನುಭವಿಸುತ್ತಿದ್ದಾರೆ.

ಔಷಧಿಯ ಸಸ್ಯಗಳಾದ ರಣಕಲ್ಲಿ, ನೆಲಬೇವು, ಕಸ್ತೂರಿ, ದೊಡ್ಡಪತ್ರಿ ಸೇರಿದಂತೆ ಅರೇಕಾ, ಝಡ್ ಝಡ್ ಪ್ಲ್ಯಾಂಟ್ಸ್, ಸೆಕ್ಯುಲಂಟ್ ಪ್ಲ್ಯಾಂಟ್ಸ್, ಅಡೋನಿಯಮ್ಸ್ ನಂತಹ ಅನೇಕ ತಹರೇವಾರಿ ಸಸಿಗಳನ್ನು ಇವರು ತಮ್ಮ ಮನೆಯ ಟೆರೇಸ್ ಮೇಲೆ ಹವ್ಯಾಸಕ್ಕಾಗಿ ಜೋಪಾನ ಮಾಡುತ್ತಿದ್ದಾರೆ.

ಈ ಹವ್ಯಾಸದ ಬಗ್ಗೆ ಸ್ವತಃ ಗಂಗಯ್ಯ ಹಿರೇಮಠ ಅವರೇ ಹೇಳ್ತಾರೆ ಕೇಳಿ

ಇನ್ನು ಗಂಗಯ್ಯ ಹಿರೇಮಠ ಅವರ ಪತ್ನಿ ಮಮತಾ ಅವರು ಕೂಡ ಈ ಸಸಿಗಳನ್ನು ಅತ್ಯಂತ ಕಾಳಜಿಯಿಂದ ಜೋಪಾನ ಮಾಡ್ತಾರೆ.

ಈ ಸಸಿಗಳಿಗೆ ಬೇಕಾದ ಎರೆಹುಳು ಗೊಬ್ಬರನ್ನು ಸ್ವತಃ ತಾವೇ ಸಿದ್ಧಪಡಿಸುವ ಈ ದಂಪತಿ, ಕಸದಿಂದ ರಸವನ್ನು ತೆಗೆಯುತ್ತಿದ್ದಾರೆ. ಇನ್ನು ಮಳೆಯ ನೀರು ವೇಸ್ಟ್ ಆಗಬಾರದು ಅಂತಾ ಮನೆಯ ಹಿಂಭಾಗದಲ್ಲಿ ಇಂಗುಗುಂಡಿಯನ್ನೂ ನಿರ್ಮಿಸಿ ಭೂಮಿಯ ಅಂತರ್ಜಲಮಟ್ಟ ಹೆಚ್ಚಳ ಮಾಡಲು ಕೈ ಜೋಡಿಸಿದ್ದಾರೆ. ಏನೇ ಆಗಲಿ ನಿವೃತ್ತ ಶಿಕ್ಷಕನ ಈ ಪರಿಸರ ಪ್ರೇಮ ಹಾಗೂ ಹವ್ಯಾಸಕ್ಕೆ ನಾವೂ ಒಂದು ಮೆಚ್ಚುಗೆ ವ್ಯಕ್ತಪಡಿಸಲೇಬೇಕಲ್ಲವೇ?

Edited By : Nagesh Gaonkar
Kshetra Samachara

Kshetra Samachara

18/11/2020 08:59 am

Cinque Terre

68.57 K

Cinque Terre

20

ಸಂಬಂಧಿತ ಸುದ್ದಿ