ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹರಿಯುತ್ತಿದ್ದ ಹಳ್ಳ ದಾಟುವ ಸಾಹಸ; ಬದುಕಿತು ಆರು ಜನರ ಪ್ರಾಣ

ಕುಂದಗೋಳ: ತಾಲೂಕಿನ ಕಡಪಟ್ಟಿ ಅಲ್ಲಾಪೂರ ಮಾರ್ಗದ ಹಳ್ಳದಲ್ಲಿ ಆರು ಜನ ಸಿಲುಕಿಕೊಂಡು ಅದೃಷ್ಟವಶಾತ್ ಪ್ರಾಣಹಾನಿಯಿಂದ ಪಾರಾದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ಎಂದಿನಂತೆ ಹುಬ್ಬಳ್ಳಿಗೆ ತೆರಳಿ ಕರ್ತವ್ಯ ಮುಗಿಸಿಕೊಂಡು ಕುಂದಗೋಳ ತಾಲೂಕಿನ ಕಡಪಟ್ಟಿಗೆ ಆಗಮಿಸುತ್ತಿದ್ದ ಆರು ಜನ ತುಂಬಿ ಹರಿಯುತ್ತಿರುವ ಹಳ್ಳವನ್ನು ಲೆಕ್ಕಿಸದೇ ಹಳ್ಳ ದಾಟುವ ಸಾಹಸ ಮಾಡಲು ಹೋಗಿ ನೀರಿನ ರಭಸಕ್ಕೆ ಮುಂದೆ ಬರಲಾಗದೆ, ಹಳ್ಳದ ತಡೆಗೋಡೆ ಹಿಡಿದುಕೊಂಡು ರಾತ್ರಿ 10-30 ರಿಂದ 2 ಗಂಟೆ 10 ನಿಮಿಷದವರೆಗೆ ಸಮಯ ಕಳೆದಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹುಬ್ಬಳ್ಳಿ ತಹಶೀಲ್ದಾರ ಪ್ರಕಾಶ್ ನಾಶಿ, ಕುಂದಗೋಳ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಹಾಗೂ ಅಮಗೋಳದ ಅಗ್ನಿಶಾಮಕ ದಳದ ಅಧಿಕಾರಿಗಳು ಹಳ್ಯಾಳ ಗ್ರಾಮಸ್ಥರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಬೋಟ್ ಮೂಲಕ ಹಗ್ಗ ನೀಡಿ ಹಳ್ಳದಲ್ಲಿ ಸಿಲುಕಿದವರನ್ನು ರಕ್ಷಿಸಿದ್ದಾರೆ.

ಕಡಪಟ್ಟಿ ಗ್ರಾಮದ ಮಲ್ಲಯ್ಯ ಪೂಜಾರ, ಶಂಭು ಪೂಜಾರ, ಮಹಾಂತೇಶ್ ಪೂಜಾರ, ಚಂದ್ರು ಕುಬಿಹಾಳ, ಚಿದಾನಂದ ಬಳ್ಳೂರು, ವಿಜಯ ಶರೇವಾಡ ಹಳ್ಳದಲ್ಲಿ ಸಿಲುಕಿ ಹಾಕಿಕೊಂಡು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದವರು.

ಸದ್ಯ ಪ್ರತಿ ಬಾರಿ ಧಾರಾಕಾರ ಮಳೆ ಸುರಿದಾಗಲೂ ಹಳ್ಯಾಳ ಕಡಪಟ್ಟಿ ಮದ್ಯದ ಹಳ್ಳ ತುಂಬಿ ಸಂಚಾರವನ್ನೇ ಸ್ಥಗಿತ ಮಾಡುತ್ತಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಕ್ರಮ ಕೈಗೊಂಡಿಲ್ಲ, ಲೋಕೋಪಯೋಗಿ ಇಲಾಖೆ ಗಮನಿಸುತ್ತಿಲ್ಲಾ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

06/09/2022 01:56 pm

Cinque Terre

44.04 K

Cinque Terre

2

ಸಂಬಂಧಿತ ಸುದ್ದಿ